72 ಎಸೆತಗಳಲ್ಲಿ 300 ರನ್ ಚಚ್ಚಿದ ಡೆಲ್ಲಿ ಬ್ಯಾಟ್ಸ್`ಮನ್.. ಟಿ-20ಯಲ್ಲಿ ಹೊಸ ದಾಖಲೆ
ಮಂಗಳವಾರ, 7 ಫೆಬ್ರವರಿ 2017 (21:26 IST)
ಟಿ-20 ಕ್ರಿಕೆಟ್`ನಲ್ಲಿ ದಾಖಲೆಗಳಿಗೇನೂ ಬರಲಿಲ್ಲ. ರನ್ ಹೊಳೆ ಹರಿಯುವ ಚುಟುಕು ಕ್ರಿಕೆಟ್`ನಲ್ಲಿ ದೆಹಲಿ ಬ್ಯಾಟ್ಸ್`ಮನ್ ಹೊಸ ದಾಖಲೆ ಬರೆದಿದ್ದಾನೆ. ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ ಮನ್ ಮೋಹಿತ್ ಅಹ್ಲಾವತ್ 72 ಎಸೆತಗಳಲ್ಲಿ 300 ರನ್ ಸಿಡಿಸಿ ಕ್ರಿಕೆಟ್ ಜಗತ್ತನ್ನೇ ನಿಬ್ಬೆರಗಾಗಿಸಿದ್ದಾನೆ. ಈ ಅಮೋಘ ಆಟದಲ್ಲಿ ಭರ್ಜರಿ 39 ಸಿಕ್ಸರ್`ಗಳಿದ್ದವು.
ನವದೆಹಲಿಯ ಲಲಿತ ಪಾರ್ಕ್`ನಲ್ಲಿ ನಡೆದ ಮಾವಿ ಇಲೆವೆನ್ ಮತ್ತು ಫ್ರೆಂಡ್ಸ್ ಇಲೆವೆನ್ ನಡುವಿನ ಪಂದ್ಯದಲ್ಲಿ ಮಾವಿ ಇಲೆವೆನ್ ತಂಡದ ಮೋಹಿತ್ ಈ ದಾಖಲೆ ಬರೆದಿದ್ದಾರೆ. 3 ಪ್ರಥಮ ದರ್ಜೆ ಪಂದ್ಯಗಳನ್ನಾಡಿರುವ 21 ವರ್ಷದ ಮೋಹಿತ್ ಸಾಧನೆ ದೇಶದ ಗಮನ ಸೆಳೆದಿದೆ.
ಇಷ್ಟೇ ಅಲ್ಲ, ಬಬ್ಬ ದುರಾಳಿ ಬೌಲರ್`ಗೆ ಮೋಹಿತ್ 14 ಬೌಂಡರಿ ಹೊಡೆದಿದ್ದಾನೆ. ಮೋಹಿತ್ ತ್ರಿಶತಕದ ನೆರವಿನಿಂದ ತಂಡ 416 ರನ್ ಕಲೆ ಹಾಕಿತ್ತು. 216 ರನ್ ಅಂತರದಿಂದ ಪಂದ್ಯ ಗೆದ್ದಿದೆ. ಟಿ-20ಯಲ್ಲಿ ಆರ್`ಸಿಬಿ ಆಟಗಾರ ಕ್ರಿಸ್ ಗೇಲ್ ಸಿಡಿಸಿದ್ದ 175 ರನ್ ಇದುವರೆಗಿನ ದೊಡ್ಡ ಮೊತ್ತವಾಗಿತ್ತು.