ಸಿಧು ಅವರ ಪತ್ನಿ ನವಜೋತ್ ಕೌರ್ ಈ ಶಾಕಿಂಗ್ ಸುದ್ದಿಯನ್ನು ದೃಢೀಕರಿಸಿದ್ದಾರೆ.
ಪಂಜಾಬ್ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ನಗುವಿನ ಗುರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗುತ್ತಿದೆ.
ಇನ್ನು ಸಿಧು ಸಂಪೂರ್ಣವಾಗಿ ಪಂಜಾಬ್ ರಾಜಕೀಯದ ಕಡೆ ಗಮನ ಹರಿಸಲಿದ್ದಾರೆ. ಹೀಗಾಗಿ ಸೆಪ್ಟೆಂಬರ್ 30ರವರೆಗಿನ ಎಲ್ಲ ಶೋಗಳನ್ನು ಅವರು ಈಗಾಗಲೇ ರೆಕಾರ್ಡ್ ಮಾಡಿ ಮುಗಿಸಿದ್ದು, ಕಾರ್ಯಕ್ರಮಕ್ಕೆ ಗುಡ್ ಬೈ ಹೇಳಿಯಾಗಿದೆ ಎಂದು ಸಿಧು ಪತ್ನಿ ಹೇಳಿದ್ದಾರೆ.