ಫಾರ್ಮ್ ನಲ್ಲಿದ್ದ ಕೆಎಲ್ ರಾಹುಲ್ ರನ್ನು ಟೆಸ್ಟ್ ತಂಡದಿಂದ ಕೈಬಿಟ್ಟಿದ್ದೇಕೆ?

ಬುಧವಾರ, 26 ಫೆಬ್ರವರಿ 2020 (09:13 IST)
ಮುಂಬೈ: ಟೆಸ್ಟ್ ತಂಡದ ಆರಂಭಿಕರಾಗಿದ್ದ ಕೆಎಲ್ ರಾಹುಲ್ ಫಾರ್ಮ್ ಕೊರತೆ ಅನುಭವಿಸುತ್ತಿದ್ದಾಗ ಅವರನ್ನು ಟೆಸ್ಟ್ ತಂಡದಿಂದ ಹೊರಗಿಟ್ಟು ರೋಹಿತ್ ಶರ್ಮಾಗೆ ಅವಕಾಶ ನೀಡಲಾಯಿತು.


ಆದರೆ ಈಗ ರೋಹಿತ್ ಶರ್ಮಾ ಗಾಯಗೊಂಡು ತಂಡದಿಂದ ಹೊರಗುಳಿದಿದ್ದಾರೆ. ಜತೆಗೆ ರಾಹುಲ್ ಅದ್ಭುತ ಫಾರ್ಮ್ ನಲ್ಲಿದ್ದಾರೆ. ಹೀಗಿರುವಾಗ ರಾಹುಲ್ ರನ್ನು ಕೈಬಿಟ್ಟು ಟೀಂ ಇಂಡಿಯಾ ಏನು ಸಾಧಿಸಲು ಹೊರಟಿದೆ ಎಂದು ಮಾಜಿ ನಾಯಕ ಕಪಿಲ್ ದೇವ್ ಪ್ರಶ್ನಿಸಿದ್ದಾರೆ.

ರೋಹಿತ್ ಶರ್ಮಾ ಅನುಪಸ್ಥಿತಿಯಲ್ಲಿ ತಂಡದ ಬ್ಯಾಟಿಂಗ್ ಗೆ ಬಲ ತುಂಬಲು ರಾಹುಲ್ ರನ್ನು ಟೆಸ್ಟ್ ತಂಡಕ್ಕೂ ಆಯ್ಕೆ ಮಾಡಬೇಕಿತ್ತು. ಯಾರಿಗೂ ತಂಡದಲ್ಲಿ ಸ್ಥಾನ ಖಾಯಂ ಅಲ್ಲ. ಆದರೆ ಪದೇ ಪದೇ ಈ ರೀತಿ ಆಡುವ ಬಳಗದಲ್ಲಿ ಬದಲಾವಣೆ ಮಾಡುವುದರ ಔಚಿತ್ಯವೇನು ಎಂದು ಕಪಿಲ್ ಭಾರತೀಯ ತಂಡದ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ