ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಹೊಗಳುವ ಭರದಲ್ಲಿ ನಗೆಪಾಟಲಿಗೀಡಾದ ಆರ್.ಅಶ್ವಿನ್

ಗುರುವಾರ, 20 ಜುಲೈ 2017 (10:38 IST)
ಚೆನ್ನೈ: ಐಪಿಎಲ್ ನ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮೂಲಕ ಪ್ರವರ್ಧಮಾನಕ್ಕೆ ಬಂದ ಹಿರಿಯ ಸ್ಪಿನ್ನರ್ ಆರ್. ಅಶ್ವಿನ್ ತಮ್ಮ ಮಾತೃ ತಂಡವನ್ನು ಹೊಗಳುವ ಭರದಲ್ಲಿ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಗುರಿಯಾಗಿದ್ದಾರೆ.


ಮ್ಯಾಚ್ ಫಿಕ್ಸಿಂಗ್ ಕಳಂಕದಿಂದಾಗಿ ಎರಡು ವರ್ಷದ ನಿಷೇಧ ಶಿಕ್ಷೆ ಮುಗಿಸಿ ಐಪಿಎಲ್ ಗೆ ಮರಳುತ್ತಿರುವ ತಂಡವನ್ನು ಅಶ್ವಿನ್ ಮ್ಯಾಂಚೆಸ್ಟರ್ ಯುನೈಟೆಡ್ ತಂಡ ವಿಮಾನ ಅಪಘಾತದಲ್ಲಿ ತನ್ನ ಎಲ್ಲಾ ಆಟಗಾರರನ್ನು ಕಳೆದುಕೊಂಡ ಮೇಲೆ ಕಣಕ್ಕೆ ವಾಪಸ್ ಮಾಡಿದ ಘಟನೆಗೆ ಹೋಲಿಸಿದ್ದರು. ಇದು ಭಾರೀ ಟೀಕೆಗೆ ಗುರಿಯಾಗಿದೆ.

ಮ್ಯಾಚ್ ಫಿಕ್ಸಿಂಗ್ ನಂತಹ ಮೋಸದಾಟ ಮಾಡಿ ನಿಷೇಧ ಶಿಕ್ಷೆಗೊಳಗಾದ ಸಿಎಸ್ ಕೆ ತಂಡವೆಲ್ಲಿ? 20 ಆಟಗಾರರನ್ನು ಕಳೆದುಕೊಂಡು ಮರಳಿದ ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಸ್ಪೂರ್ತಿದಾಯಕ ಕತೆಯೆಲ್ಲಿ ಎಂದು ಅಭಿಮಾನಿಗಳು ತಪರಾಕಿ ನೀಡಿದ್ದಾರೆ. ಅಭಿಮಾನಿಗಳ ಈ ಸಂದೇಶಗಳನ್ನು ಓದಿ ಪ್ರತಿಕ್ರಿಯಿಸಿದ ಅಶ್ವಿನ್, ದಯವಿಟ್ಟು ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸದಿರಿ.

ನಾನು 2 ವರ್ಷದ ಬ್ರೇಕ್ ನಂತರ ಕಣಕ್ಕೆ ವಾಪಸಾಗುತ್ತಿರುವದನ್ನಷ್ಟೇ ಉಲ್ಲೇಖಿಸಿದ್ದೇನೆ. ಇದರ ಹೊರತಾಗಿ ಬೇರೆ ಅರ್ಥ ಕಲ್ಪಿಸಬೇಡಿ. ನನ್ನನ್ನು ಟೀಕಿಸುತ್ತಿರುವವರು ದಯವಿಟ್ಟು ತಮ್ಮ ಸಂದೇಶ ಬಿಡುವುದನ್ನು ನಿಲ್ಲಿಸಿ, ಮುಂದಿನ ಬಾರಿ ಇಂತಹದ್ದೊಂದು ವಿವಾದವಾಗುವಾಗ ಸಿಗೋಣ ಎಂದು ಉತ್ತರ ನೀಡಿದ್ದಾರೆ.

ಇದನ್ನೂ ಓದಿ..  ರವಿಶಾಸ್ತ್ರಿ ಜತೆ ಸುಲಭವಾಗಿ ಅಡ್ಜಸ್ಟ್ ಆಗ್ತೀನಿ ಎಂದ ಕೊಹ್ಲಿ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ