ಐಪಿಎಲ್ 2022: ಧೋನಿ ಬಂದ ಬೆನ್ನಲ್ಲೇ ಚೆನ್ನೈಗೆ ಗೆಲುವಿನ ಸಂಭ್ರಮ

ಸೋಮವಾರ, 2 ಮೇ 2022 (08:30 IST)
ಮುಂಬೈ: ಧೋನಿ ಮತ್ತೆ ನಾಯಕರಾಗಿ ಕಮ್ ಬ್ಯಾಕ್ ಮಾಡಿದ ಬೆನ್ನಲ್ಲೇ ಚೆನ್ನೈ ಸೂಪರ್ ಕಿಂಗ್ಸ್ ಗೆಲುವು ಕಂಡಿದೆ. ಹೈದರಾಬಾದ್ ವಿರುದ್ಧದ ಪಂದ್ಯವನ್ನು 13 ರನ್ ಗಳಿಂದ ಗೆದ್ದುಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಿತು. ಋತುರಾಜ್ ಗಾಯಕ್ ವಾಡ್ 99 ರನ್ ಗಳಿಸಿ ಔಟಾದರು. ಇನ್ನೊಬ್ಬ ಆರಂಭಿಕ ಕಾನ್ವೇ ಅಜೇಯ 85 ರನ್ ಗಳಿಸಿದರು.

ಈ ಮೊತ್ತ ಬೆನ್ನತ್ತಿದ ಹೈದರಾಬಾದ್ ಗೆ 20 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಲಷ್ಟೇ ಶಕ್ತವಾಯಿತು. ಅಭಿಷೇಕ್ ಶರ್ಮಾ 39, ಕೇನ್ ವಿಲಿಯಮ್ಸನ್ 47, ನಿಕಲಸ್ ಪೂರನ್ 64 ರನ್ ಗಳಿಸಿದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ