ಐಪಿಎಲ್ 2022: ಡೆಲ್ಲಿ-ಲಕ್ನೋ ನಡುವೆ ಇಂದು ಜಿದ್ದಾಜಿದ್ದಿನ ಹೋರಾಟ

ಭಾನುವಾರ, 1 ಮೇ 2022 (08:20 IST)
ಮುಂಬೈ: ಐಪಿಎಲ್ 2022 ರ ಇಂದಿನ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ಪರಸ್ಪರ ಸೆಣಸಾಡಲಿವೆ.

ಕೆಎಲ್ ರಾಹುಲ್ ಅದ್ಭುತ ಫಾರ್ಮ್ ನ ಬಲದಲ್ಲಿರುವ ಲಕ್ನೋ ಇದೇ ಕೂಟದಲ್ಲಿ ಈ ಮೊದಲು ಡೆಲ್ಲಿಯನ್ನು ಮಣಿಸಿತ್ತು. ಹೀಗಾಗಿ ಅದೇ ಪ್ರದರ್ಶನ ಮುಂದುವರಿಸಿಕೊಂಡು ಹೋಗುವ ವಿಶ್ವಾಸದಲ್ಲಿದೆ.

ಇತ್ತ ಡೆಲ್ಲಿ ಕಳೆದ ಪಂದ್ಯದಲ್ಲಿ ಗೆದ್ದು ಕೊಂಚ ಚೇತರಿಕೆ ಕಂಡಿದ್ದು, ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ಒಂದು ವೇಳೆ ಡೆಲ್ಲಿ ಇಂದು ಗೆದ್ದರೆ ಮತ್ತೆ ಅಗ್ರ ನಾಲ್ಕರೊಳಗೆ ಸ್ಥಾನ ಪಡೆಯಲು ಪೈಪೋಟಿ ನಡೆಸಲಿದೆ. ಈ ಪಂದ್ಯ ಅಪರಾಹ್ನ 3.30 ಕ್ಕೆ ಆರಂಭವಾಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ