ವಿಶ್ವವನ್ನೇ ಗೆದ್ದರೂ ದ್ರಾವಿಡ್ ಮುಖ ಭಾವ ಹೇಗಿತ್ತು ಗೊತ್ತಾ?!
ನಂತರ ಸಂದರ್ಶಕರು ಮೈಕ್ ಹಿಡಿದು ಬಂದಾಗಲೂ ನನಗೆ ತುಂಬಾ ಖುಷಿಯಾಗಿದೆ ಎನ್ನುತ್ತಾ ಈ ಯಶಸ್ಸಿನ ಕ್ರೆಡಿಟ್ ಹುಡುಗರಿಗೇ ಸೇರುತ್ತದೆ, ಅವರ ಪರಿಶ್ರಮದ ಫಲವಿದು, ನನ್ನದೇನಿಲ್ಲ. ನಮ್ಮ ಬಳಿ ಅತ್ಯುತ್ತಮ ಸಹಾಯಕ ಸಿಬ್ಬಂದಿಗಳಿದ್ದರು. ನಾವು ಈ ಹುಡುಗರಿಗೆ ನಮಗೆ ಗೊತ್ತಿರುವುದನ್ನೆಲ್ಲಾ ಹೇಳಿಕೊಟ್ಟೆವು. ನಾನು ಕೋಚ್ ಆಗಿದ್ದಕ್ಕೆ ಸಾಕಷ್ಟು ಪ್ರಚಾರ ಸಿಕ್ಕಿತು. ಆದರೆ ಇದೆಲ್ಲಾ ಹುಡುಗರ ಪರಿಶ್ರಮದ ಫಲವಷ್ಟೇ ಎಂದು ದ್ರಾವಿಡ್ ಎಂದಿನ ವಿಧೇಯತೆಯಿಂದಲೇ ಹೇಳಿಕೊಂಡರು. ಇದೇ ಕಾರಣಕ್ಕೆ ದ್ರಾವಿಡ್ ನಮಗೆಲ್ಲರಿಗೂ ಇಷ್ಟವಾಗುತ್ತಾರೆ.