ರಾಹುಲ್ ದ್ರಾವಿಡ್ ಕನಸು ನನಸಾಯ್ತು! ಅಂಡರ್ 19 ವಿಶ್ವಕಪ್ ಭಾರತದ ಪಾಲಾಯ್ತು!
ಮೊದಲು ಬ್ಯಾಟಿಂಗ್ ಮಾಡಿದ್ದ ಆಸೀಸ್ ನಿಗದಿತ 50 ಓವರ್ ಗಳಲ್ಲಿ 216 ಗಳಿಸಿ ಆಲೌಟ್ ಆಗಿತ್ತು. ನಂತರ ಬ್ಯಾಟಿಂಗ್ ಆರಂಭಿಸಿದ ಭಾರತಕ್ಕೆ ನಾಯಕ ಪೃಥ್ವಿ ಶಾ(29) ಮತ್ತು ಶುಭಮ್ ಗಿಲ್ (31) ಉತ್ತಮ ಆರಂಭ ದೊರಕಿಸಿಕೊಟ್ಟರು. ನಂತರ ಬಂದ ಮನ್ ಜೋತ್ 101 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಭಾರತ 38.5 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿ ಗುರಿ ಮುಟ್ಟಿತು.