ಇಂಗ್ಲೆಂಡ್ ವಿರುದ್ಧ ಆಡಲು ಟೀಂ ಇಂಡಿಯಾಗೆ ರಾಹುಲ್ ದ್ರಾವಿಡ್ ಸಲಹೆ

ಸೋಮವಾರ, 10 ಮೇ 2021 (10:35 IST)
ಮುಂಬೈ: ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯದ ಬಳಿಕ ಇಂಗ್ಲೆಂಡ್ ನೆಲದಲ್ಲಿ ಟೆಸ್ಟ್ ಸರಣಿ ಆಡಲಿರುವ ಟೀಂ ಇಂಡಿಯಾಗೆ ತಂಡದ ಆಯ್ಕೆ ವಿಚಾರದಲ್ಲಿ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ.


ಈ ಹಿಂದೆ ಇಂಗ್ಲೆಂಡ್ ನೆಲದಲ್ಲಿ ಭಾರತ ವೈಫಲ್ಯ ಅನುಭವಿಸಿತ್ತು. ಆದರೆ ಆಸ್ಟ್ರೇಲಿಯಾದಲ್ಲಿ ಟೆಸ್ಟ್ ಸರಣಿ ಗೆದ್ದ ಬಳಿಕ ಟೀಂ ಇಂಡಿಯಾ ಈಗ ಇಂಗ್ಲೆಂಡ್ ನಲ್ಲೂ ಮೇಲುಗೈ ಸಾಧಿಸುವ ವಿಶ್ವಾಸದಲ್ಲಿದೆ.

ಹೀಗಾಗಿ ಇಂಗ್ಲೆಂಡ್ ಪ್ರವಾಸ ಮಾಡಲಿರುವ ಟೀಂ ಇಂಡಿಯಾಗೆ ದ್ರಾವಿಡ್ ಸಲಹೆ ನೀಡಿದ್ದಾರೆ. ‘ಭಾರತ ಜಡೇಜಾ ಮತ್ತು ಅಶ್ವಿನ್ ಇಬ್ಬರನ್ನೂ ಆಡುವ ಬಳಗದಲ್ಲಿ ಸೇರಿಸಬಹುದು.  ಇಬ್ಬರೂ ಚೆನ್ನಾಗಿ ಬ್ಯಾಟಿಂಗ್ ಕೂಡಾ ಮಾಡುತ್ತಾರೆ. ಹೀಗಾಗಿ ಇಬ್ಬರನ್ನೂ ಆಲ್ ರೌಂಡರ್ ರೂಪದಲ್ಲಿ ನೋಡಬಹುದು.

ಒಂದು ವೇಳೆ ಇಂಗ್ಲೆಂಡ್ ನಲ್ಲಿ ಬೇಸಿಗೆ ಚೆನ್ನಾಗಿದ್ದು ಪಿಚ್ ಒಣಗಿದ್ದರೆ ಸ್ಪಿನ್ನರ್ ಗಳಿಗೆ ಸಹಕಾರಿಯಾಗಬಹುದು. ಹಾಗಿದ್ದಾಗ ಸ್ಪಿನ್ನರ್ ಗಳ ಪಾತ್ರ ಮುಖ್ಯವಾಗಲಿದೆ. ನನ್ನ ಅನುಭವದ ಪ್ರಕಾರ ಇಂಗ್ಲೆಂಡ್ ನಲ್ಲಿ ಬ್ಯಾಟಿಂಗ್ ಮಾಡಲು ಬಿಸಿಲು ಬೇಕು. ಸುಮಾರು ನಾಲ್ಕೈದು ದಿನಗಳವರೆಗೆ ನೀರು ಹಾಕದೇ ಪಿಚ್ ಒಣಗಿದರೆ ಬಾಲ್ ತಿರುವು ಪಡೆಯಲು ಆರಂಭಿಸುತ್ತದೆ’ ಎಂದಿದ್ದಾರೆ ದ್ರಾವಿಡ್.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ