ಟಾಂಗ್ ಕೊಟ್ಟ ಯುವರಾಜ್ ಸಿಂಗ್ ಗೆ ರವಿಶಾಸ್ತ್ರಿ ಹೇಳಿದ್ದೇನು?

ಶನಿವಾರ, 4 ಏಪ್ರಿಲ್ 2020 (09:33 IST)
ಮುಂಬೈ: 2011 ರ ವಿಶ್ವಕಪ್ ಗೆಲುವಿಗೆ ಸಂಬಂಧಪಟ್ಟ ಟ್ವೀಟ್ ಒಂದರಲ್ಲಿ ತಮ್ಮ ಹೆಸರು ಉಲ್ಲೇಖಿಸದೇ ಇರುವುದಕ್ಕೆ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿಗೆ ಯುವರಾಜ್ ಸಿಂಗ್ ಟಾಂಗ್ ಕೊಟ್ಟಿದ್ದರು. ಇದಕ್ಕೀಗ ಶಾಸ್ತ್ರಿ ಉತ್ತರ ನೀಡಿದ್ದಾರೆ.


ರವಿಶಾಸ್ತ್ರಿ ತಮ್ಮ ಮತ್ತು ಧೋನಿ ಹೆಸರನ್ನು ಉಲ್ಲೇಖಿಸದೇ ಕೇವಲ ವಿರಾಟ್ ಕೊಹ್ಲಿ ಮತ್ತು ಸಚಿನ್ ಟ್ವಿಟರ್ ಖಾತೆಗಳನ್ನು ಟ್ಯಾಗ್ ಮಾಡಿದ್ದಕ್ಕೆ ಯುವರಾಜ್ ಟ್ರೋಲ್ ಮಾಡಿದ್ದರು. ಸೀನಿಯರ್ಸ್ ಗೆ ಧನ್ಯವಾದಗಳು. ಆದರೆ ವಿಶ್ವಕಪ್ ತಂಡದಲ್ಲಿ ನಾವೂ ಇದ್ದೆವು ಎಂದು ಕಾಲೆಳೆದಿದ್ದರು.

ಇದಕ್ಕೀಗ ಪ್ರತಿಕ್ರಿಯೆ ನೀಡಿರುವ ರವಿಶಾಸ್ತ್ರಿ ‘ವಿಶ್ವಕಪ್ ವಿಷಯ ಬಂದರೆ ನೀನು ಜ್ಯೂನಿಯರ್ ಅಲ್ಲ. ನೀನು ಲೆಜೆಂಡ್’ ಎಂದು ಹೊಗಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ