ರೋಹಿತ್-ಕೊಹ್ಲಿ ನಡುವಿನ ಶೀತಲ ಸಮರ ಕೊನೆಗೊಳಿಸಿದ್ದು ರವಿಶಾಸ್ತ್ರಿ!

ಮಂಗಳವಾರ, 30 ಮಾರ್ಚ್ 2021 (10:45 IST)
ಮುಂಬೈ: ಇತ್ತೀಚೆಗೆ ನಡೆದ ಇಂಗ್ಲೆಂಡ್ ಸರಣಿಯಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಉಪನಾಯಕ ರೋಹಿತ್ ಶರ್ಮಾ ಮೈದಾನದಲ್ಲಿ ಸ್ನೇಹದಿಂದಿದ್ದನ್ನು ನೋಡಿ ಎಲ್ಲರೂ ಖುಷಿಪಟ್ಟಿದ್ದರು. ಆದರೆ ಇಬ್ಬರ ನಡುವೆ ಈ ಮೊದಲು ಇದ್ದ ಶೀತಲ ಸಮರ ಕೊನೆಯಾಗಿ ಈ ರೀತಿ ಪರಸ್ಪರ ಫ್ರೆಂಡ್ಸ್ ಆಗಿದ್ದು ಹೇಗೆ ಗೊತ್ತಾ?


ಆಸ್ಟ್ರೇಲಿಯಾ ಸರಣಿಯ ವೇಳೆ ರೋಹಿತ್-ಕೊಹ್ಲಿ ನಡುವೆ ಸಂವಹನ ಕೊರತೆಯಿಂದ ವೈಮನಸ್ಯವಾಗಿದ್ದು ಮಾಧ್ಯಮಗಳ ಎದುರೇ ಬಹಿರಂಗವಾಗಿತ್ತು. ರೋಹಿತ್ ಗಾಯದ ಬಗ್ಗೆ ನನಗೆ ಮಾಹಿತಿಯೇ ಇಲ್ಲ ಎನ್ನುವ ಮೂಲಕ ಕೊಹ್ಲಿ ವೈಮನಸ್ಯ ಬಹಿರಂಗಪಡಿಸಿದ್ದರು.

ಆದರೆ ಇದಾದ ಬಳಿಕ ಕೋಚ್ ರವಿಶಾಸ್ತ್ರಿ ಇಬ್ಬರನ್ನೂ ಕೂರಿಸಿಕೊಂಡು ಮಾತುಕತೆ ಮೂಲಕ ಎಲ್ಲಾ ಭಿನ್ನಾಭಿಪ್ರಾಯಗಳನ್ನು ಮರೆಯುವಂತೆ ಮಾಡಿದ್ದಾರಂತೆ. ಇದೇ ಕಾರಣಕ್ಕೆ ಇಬ್ಬರೂ ಇಂಗ್ಲೆಂಡ್ ಸರಣಿಯಲ್ಲಿ ನಗು ನಗುತ್ತಲೇ ಜೊತೆಯಾಟವಾಡಿ ಎದುರಾಳಿಗಳನ್ನು ಸೋಲಿಸಿದ್ದಾರೆ. ಅಷ್ಟೇ ಏಕೆ, ಅಂತಿಮ ಏಕದಿನ ಪಂದ್ಯದ ವೇಳೆ ಕೊನೆಯ ಓವರ್ ಗಳಲ್ಲಿ ಒತ್ತಡದ ಸನ್ನಿವೇಶದಲ್ಲಿ ಸ್ವತಃ ರೋಹಿತ್ ಶರ್ಮಾ ಬೌಲರ್ ಗಳೇ ಖುದ್ದಾಗಿ ಸಲಹೆ ಸೂಚನೆ ನೀಡಿ ಉಪನಾಯಕನ ಕರ್ತವ್ಯವನ್ನು ಯಶಸ್ವಿಯಾಗಿ ನಿರ್ವಹಿಸಿದ್ದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ