ಮೆಲ್ಬೋರ್ನ್: ಆಸ್ಟ್ರೇಲಿಯಾ ವಿರುದ್ಧ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಆಯ್ಕೆ ಸರಿಯಾಗಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದ ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಗೆ ಕೋಚ್ ರವಿಶಾಸ್ತ್ರಿ ತಿರುಗೇಟು ಕೊಟ್ಟಿದ್ದಾರೆ.
ತಂಡದ ಆಯ್ಕೆ ಸರಿಯಾಗದ ಕಾರಣಕ್ಕೇ ಟೀಂ ಇಂಡಿಯಾ ದ. ಆಫ್ರಿಕಾ ಪ್ರವಾಸದಿಂದಲೂ ಅನಿರೀಕ್ಷಿತ ಸೋಲು ಕಾಣುತ್ತಿದೆ. ಒಂದು ವೇಳೆ ಆಸ್ಟ್ರೇಲಿಯಾ ಸರಣಿ ಸೋತರೆ ಕೋಚ್ ಮತ್ತು ನಾಯಕನಿಂದ ವಿವರಣೆ ಪಡೆಯಬೇಕು ಎಂದು ಗವಾಸ್ಕರ್ ಕಿಡಿ ಕಾರಿದ್ದರು.
ಇದರ ಬಗ್ಗೆ ರವಿಶಾಸ್ತ್ರಿ ಪರೋಕ್ಷ ಟಾಂಗ್ ಕೊಟ್ಟಿದ್ದು, ‘ಸಾವಿರಾರು ಮೈಲಿ ದೂರ ನಿಂತುಕೊಂಡು ನಮ್ಮ ಬಗ್ಗೆ ಕಾಮೆಂಟ್ ಮಾಡುವುದು ಸುಲಭ. ಆದರೆ ನಾವು ತಂಡಕ್ಕೆ ಏನು ಅತ್ಯುತ್ತಮ ಎನಿಸುತ್ತದೋ ಅದನ್ನೇ ಮಾಡುತ್ತೇವೆ ಅಷ್ಟೇ’ ಎಂದು ತಿರುಗೇಟು ಕೊಟ್ಟಿದ್ದಾರೆ.
ಇನ್ನು ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ವರ್ತನೆ ಬಗ್ಗೆ ಟೀಕೆ ಮಾಡುತ್ತಿರುವವರಿಗೂ ತಿರುಗೇಟು ಕೊಟ್ಟಿರುವ ಶಾಸ್ತ್ರಿ ‘ವಿರಾಟ್ ಸ್ವಭಾವದಲ್ಲಿ ಏನು ತಪ್ಪಿದೆ? ಅವರು ಖಂಡಿತವಾಗಿಯೂ ಒಬ್ಬ ಜಂಟಲ್ ಮ್ಯಾನ್’ ಎಂದಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ