ಮೂರನೇ ಟೆಸ್ಟ್ ಏನಾದ್ರೂ ಸೋತರೆ ರವಿಶಾಸ್ತ್ರಿ, ಕೊಹ್ಲಿ ಕತೆ ಅಷ್ಟೇ..!!

ಗುರುವಾರ, 20 ಡಿಸೆಂಬರ್ 2018 (09:37 IST)
ಮೆಲ್ಬೋರ್ನ್: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟೆಸ್ಟ್ ಸರಣಿ ಈಗಾಗಲೇ 1-1 ರಿಂದ ಸಮಬಲಗೊಂಡಿದೆ. ಭಾರತ ಕಳೆದ ಪಂದ್ಯವನ್ನು ಸ್ವಯಂಕೃತ ಅಪರಾಧಗಳಿಂದಾಗಿ ಸೋತ ಮೇಲೆ ನಾಯಕ ಕೊಹ್ಲಿ ಮತ್ತು ಕೋಚ್ ರವಿಶಾಸ್ತ್ರಿ ಮೇಲೆ ಆಕ್ರೋಶ ಹೆಚ್ಚಾಗಿದೆ.


ಕಳೆದ ಪಂದ್ಯದಲ್ಲಿ ಒಬ್ಬರೇ ಒಬ್ಬ ಸ್ಪಿನ್ ಬೌಲರ್ ಗಳನ್ನು ಇಟ್ಟುಕೊಳ್ಳದೇ ಆಡಿ ಮುಖಭಂಗ ಅನುಭವಿಸಿದ್ದ ನಾಯಕ ಕೊಹ್ಲಿ ಮತ್ತು ಕೋಚ್ ಶಾಸ್ತ್ರಿ ನಡೆ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗಿತ್ತು. ಇಂತಹ ಪ್ರಮಾದಗಳನ್ನು ಎಸಗಿಕೊಂಡು ಮುಂದಿನ ಟೆಸ್ಟ್ ಸೋತರೆ ಇಬ್ಬರ ರೋಲ್ ಬಗ್ಗೆ ಪುನರ್ ವಿಮರ್ಶೆ ನಡೆಸಬೇಕಾದ ಅಗತ್ಯವಿದೆ ಎಂದು ಮಾಜಿ ಕ್ರಿಕೆಟಿಗ ಸುನಿಲ್ ಗವಾಸ್ಕರ್ ಖಾರವಾಗಿ ನುಡಿದಿದ್ದಾರೆ.

‘ದ.ಆಫ್ರಿಕಾ ಸರಣಿಯಿಂದಲೂ ಇವರಿಬ್ಬರ ಆಯ್ಕೆ ಪ್ರಮಾದಗಳನ್ನು ನೋಡುತ್ತಲೇ ಇದ್ದೇವೆ. ಮತ್ತೆ ಇಂತಹ ತಪ್ಪು ಮಾಡಿ ಮುಂದಿನ ಟೆಸ್ಟ್ ಸೋತರೆ ಇಬ್ಬರಿಂದಲೂ ವಿವರಣೆ ಪಡೆಯಬೇಕು. ಸರಿಯಾಗಿ ತಂಡದ ಆಯ್ಕೆ ಮಾಡಿರುತ್ತಿದ್ದರೆ ದ್ವಿತೀಯ ಟೆಸ್ಟ್ ಪಂದ್ಯವನ್ನು ಗೆಲ್ಲಬಹುದಾಗಿತ್ತು. ಆದರೆ ಇವರಿಬ್ಬರ ತಲೆಬುಡವಿಲ್ಲದ ಆಯ್ಕೆಯಿಂದಾಗಿ ಪ್ರಮಾದವಾಗಿದೆ’ ಎಂದು ಗವಾಸ್ಕರ್ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ