ಅನುಷ್ಕಾ ನೋಡಲು ಮಾಲ್ ಗೆ ಬಂದ ವಿರಾಟ್ ಕೊಹ್ಲಿ!

ಭಾನುವಾರ, 23 ಡಿಸೆಂಬರ್ 2018 (09:36 IST)
ಮೆಲ್ಬೋರ್ನ್: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಸರಣಿಗಾಗಿ ಆ ದೇಶದಲ್ಲಿದ್ದು, ಅವರ ಪತ್ನಿಯನ್ನು ತೆರೆಯ ಮೇಲೆ ನೋಡಲು ಮೆಲ್ಬೋರ್ನ್ ನ ಮಾಲ್ ಒಂದಕ್ಕೆ ಹೋಗಿದ್ದಾರೆ!


ಅನುಷ್ಕಾ ಮತ್ತು ಶಾರುಖ್ ಖಾನ್, ಕತ್ರಿನಾ ಕೈಫ್ ಜತೆಯಾಗಿ ನಟಿಸಿರುವ ಜೀರೋ ಚಿತ್ರ ಮೊನ್ನೆಯಷ್ಟೇ ಬಿಡುಗಡೆಯಾಗಿದ್ದು, ಆ ಸಿನಿಮಾ ಆಸ್ಟ್ರೇಲಿಯಾದಲ್ಲೂ ತೆರೆ ಕಂಡಿದೆ. ಹೀಗಾಗಿ ಪತ್ನಿ ನಟಿಸಿರುವ ಸಿನಿಮಾ ನೋಡಲು ಕೊಹ್ಲಿ ಮೆಲ್ಬೋರ್ನ್ ನ ಸಿಟಿ ಮಾಲ್ ಗೆ ತೆರಳಿದ್ದಾರೆ.

ಕೊಹ್ಲಿ ಮಾಲ್ ನಿಂದ ಹೊರಬರುತ್ತಿರುವ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯಾವತ್ತೂ ತಮ್ಮ ಪತ್ನಿಯ ಸಿನಿಮಾಗಳನ್ನು ತಪ್ಪದೇ ನೋಡುವ ಕೊಹ್ಲಿ ಆಸ್ಟ್ರೇಲಿಯಾದಲ್ಲಿದ್ದರೂ ಆ ಪದ್ಧತಿಯನ್ನು ತಪ್ಪಿಸಿಲ್ಲ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ