‘ಡಮ್ಮಿ ಪೋಸ್ ಕೊಡಬೇಡಿ, ಹುಡುಗರಿಗೆ ಆಡಲು ಹೇಳಿ ಕೊಡಿ’

ಶನಿವಾರ, 20 ಜನವರಿ 2018 (07:56 IST)
ಸೆಂಚೂರಿಯನ್: ದ.ಆಫ್ರಿಕಾದಲ್ಲಿ ಕ್ರಿಕೆಟ್ ಆಡಲು ಹೋಗಿ ಸೋತು ಸುಣ್ಣವಾಗಿರುವ ಟೀಂ ಇಂಡಿಯಾ ಕ್ರಿಕೆಟಿಗರನ್ನು ಅಭಿಮಾನಿಗಳು ಹಿಗ್ಗಾ ಮುಗ್ಗಾ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
 

ಕೋಚ್ ರವಿಶಾಸ್ತ್ರಿ, ಕ್ರಿಕೆಟಿಗ ಚೇತೇಶ್ವರ ಪೂಜಾರ ಜತೆಗೆ ಚಿರತೆಯ ಬೊಂಬೆ ಜತೆಗೆ ಪೋಸ್ ಕೊಟ್ಟ ಫೋಟೋವೊಂದನ್ನು ಟ್ವಿಟರ್ ನಲ್ಲಿ ಪ್ರಕಟಿಸಿದ್ದರು. ಇದನ್ನು ನೋಡಿ ಅಭಿಮಾನಿಗಳು ಹಿಗ್ಗಾ ಮುಗ್ಗಾ ಕಾಮೆಂಟ್ ಮಾಡಿದ್ದಾರೆ.

ಚಿರತೆ ಜತೆಗೆ ಪೋಸ್ ಕೊಡುವುದು ಬಿಟ್ಟು ನಿಮ್ಮ ಹುಡುಗರಿಗೆ ಕ್ರಿಕೆಟ್ ಆಡಲು ಹೇಳಿಕೊಡಿ. ಅದರಲ್ಲೂ ವಿಶೇಷವಾಗಿ ಹಾರ್ದಿಕ್ ಪಾಂಡ್ಯಗೆ ಬ್ಯಾಟ್ ಕ್ರೀಸ್ ನಲ್ಲಿ ಇಡುವುದು ಹೇಗೆಂದು ಹೇಳಿಕೊಡಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನೊಬ್ಬರು ಈ ಚಿರತೆಯನ್ನು ಪೂಜಾರ ಹಿಂದೆ ಬಿಡಿ. ಹಾಗಾದರೂ ಕ್ರೀಸ್ ನಡುವೆ ಓಡಲು ಪ್ರಾಕ್ಟೀಸ್ ಮಾಡಲಿ ಎಂದಿದ್ದಾರೆ. ಮತ್ತೆ ಕೆಲವರು ನೀವು ಕಮೆಂಟರಿ ಹೇಳಲಿಕ್ಕಷ್ಟೇ ಲಾಯಕ್ಕು ಎಂದು ಜಾಡಿಸಿದ್ದಾರೆ. ಅಂತೂ ಟೆಸ್ಟ್ ಸರಣಿ ಸೋತಿದ್ದಕ್ಕೆ ಅಭಿಮಾನಿಗಳು ತೀರಾ ಗರಂ ಆಗಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ