ಟೆಸ್ಟ್ ಸೋತರೇನಂತೆ? ವಿರಾಟ್ ಕೊಹ್ಲಿಗೆ ಬಂತು ಬಂಪರ್ ಸುದ್ದಿ!

ಗುರುವಾರ, 18 ಜನವರಿ 2018 (12:36 IST)
ದುಬೈ: ದ.ಆಫ್ರಿಕಾ ವಿರುದ್ದ ಟೆಸ್ಟ್ ಸರಣಿ ಸೋತಿರುವ ಬೇಸರದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಖುಷಿ ನೀಡುವಂತಹ ಸುದ್ದಿ ಬಂದಿದೆ.
 

ವಿರಾಟ್ ಕೊಹ್ಲಿ 2017 ನೇ ಸಾಲಿನ ಐಸಿಸಿ ನೀಡುವ ವರ್ಷದ ಕ್ರಿಕೆಟರ್ ಪ್ರಶಸ್ತಿಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಐಸಿಸಿ ಪ್ರಕಟಿಸಿ ಈ ಸಾಲಿನ ಟೆಸ್ಟ್ ಮತ್ತು ಏಕದಿನ ತಂಡಕ್ಕೂ ಕೊಹ್ಲಿ ನಾಯಕರಾಗಿ ಆಯ್ಕೆಯಾಗಿದ್ದಾರೆ.

ಸೆಪ್ಟೆಂಬರ್ 2016 ರಿಂದ 2017 ರವರೆಗಿನ ಅಂಕಿ ಅಂಶಗಳನ್ನು ಪರಿಗಣಿಸಿ ಐಸಿಸಿ ಈ ಪ್ರಶಸ್ತಿಗೆ ಟೀಂ ಇಂಡಿಯಾ ನಾಯಕನ ಹೆಸರನ್ನು ಆಯ್ಕೆ ಮಾಡಿದೆ.  ಏಕದಿನ ಪ್ರಶಸ್ತಿ ರೇಸ್ ನಲ್ಲಿ ಕೊಹ್ಲಿ ಜತೆ ರೋಹಿತ್ ಶರ್ಮಾ ಕೂಡಾ ನಾಮಾಂಕಿತರಾಗಿದ್ದರು. ಆದರೆ ಅಂತಿಮವಾಗಿ ಕೊಹ್ಲಿಗೆ ಪ್ರಶಸ್ತಿ ಒಲಿದಿದೆ. ಟಿ20 ಕ್ರಿಕೆಟ್ ನಲ್ಲಿ ಬೆಸ್ಟ್ ಬೌಲಿಂಗ್ ಫಿಗರ್ ಪ್ರಶಸ್ತಿಗೆ ಟೀಂ ಇಂಡಿಯಾದ ಯಜುವೇಂದ್ರ ಚಾಹಲ್ ಭಾಜನರಾಗಿದ್ದಾರೆ. ಬೆಂಗಳೂರಿನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ 6 ವಿಕೆಟ್ ಕಿತ್ತ ಅವರ ಪ್ರದರ್ಶನಕ್ಕೆ ಪ್ರಶಸ್ತಿ ಬಂದಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ