‘ನಿನಗೆ ಸಿಗಬೇಕಾಗಿದ್ದೇ ಇದು!’ ವಿರಾಟ್ ಕೊಹ್ಲಿಗೆ ಸಚಿನ್ ತೆಂಡುಲ್ಕರ್ ಹೀಗೆ ಹೇಳಿದ್ದೇಕೆ?!

ಶುಕ್ರವಾರ, 19 ಜನವರಿ 2018 (08:44 IST)
ಮುಂಬೈ: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬೇಸರದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಐಸಿಸಿ ವರ್ಷದ ಕ್ರಿಕೆಟ್ ಪ್ರಶಸ್ತಿ ಸಮಾಧಾನ ತಂದಿದೆ.
 

ಈ ಸಂದರ್ಭದಲ್ಲಿ ಅವರಿಗೆ ಕ್ರಿಕೆಟ್ ಲೋಕದಾದ್ಯಂತ ಅಭಿನಂದನೆಗಳು ಹರಿದುಬರುತ್ತಿವೆ. ಕಳೆದ ವರ್ಷದ ಅದ್ಭುತ ಫಾರ್ಮ್ ನಿಂದಾಗಿ ಕೊಹ್ಲಿಗೆ ಈ ಪ್ರಶಸ್ತಿ ಒಲಿದುಬಂದಿತ್ತು. ಈ ಬಗ್ಗೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಕೂಡಾ ಅಭಿನಂದನೆ ಸಲ್ಲಿಸಿದ್ದಾರೆ.

‘ಇದರಲ್ಲಿ ಅಚ್ಚರಿಪಡುವಂತದ್ದೇನಿಲ್ಲ. ನೀನು ಈ ಪ್ರಶಸ್ತಿಗೆ ಅರ್ಹನಾಗಿದ್ದೆ. ನಿನಗೆ ಇದು ಸಿಗಬೇಕಾಗಿದ್ದೇ. ಅಭಿನಂದನೆಗಳು’  ಎಂದು ತೆಂಡುಲ್ಕರ್, ಕೊಹ್ಲಿಗೆ ಶುಭಾಷಯ ಕೋರಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ