ರವಿಚಂದ್ರನ್ ಅಶ್ವಿನ್‌ಗೆ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಅಗ್ರಸ್ಥಾನ

ಮಂಗಳವಾರ, 26 ಜುಲೈ 2016 (18:40 IST)
ಉಪಖಂಡದ ಇಬ್ಬರು ಸ್ಪಿನ್ನರುಗಳ ನಡುವೆ ಪೈಪೋಟಿಯಲ್ಲಿ ಭಾರತದ ರವಿಚಂದ್ರನ್ ಅಶ್ವಿನ್ ಅವರು ಪಾಕಿಸ್ತಾನದ ಯಾಸಿರ್ ಶಾಹ್ ಅವರನ್ನು ಹಿಂದಿಕ್ಕಿ ಐಸಿಸಿ ಟೆಸ್ಟ್ ಶ್ರೇಯಾಂಕದಲ್ಲಿ ಒಂದನೇ ನಂಬರ್ ಸ್ಥಾನವನ್ನು ಅಲಂಕರಿಸಿದ್ದಾರೆ. 2015ರ ವರ್ಷದ ಕೊನೆಯ ಶ್ರೇಯಾಂಕಗಳಲ್ಲಿ ಇದೇ ಸ್ಥಾನವನ್ನು ಅಶ್ವಿನ್ ಅಲಂಕರಿಸಿದ್ದರು.
 
ವಿರಾಟ್ ಕೊಹ್ಲಿ ಅವರ ಚೊಚ್ಚಲ ದ್ವಿಶತಕವು ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅವರನ್ನು 12ನೇ ಸ್ಥಾನಕ್ಕೆ ಮೇಲೇರಿಸಿದೆ. ಇದೇ ರೀತಿಯ ಫಾರಂನಲ್ಲಿ ಮುಂದುವರಿದರೆ ಕೊಹ್ಲಿ ಟಾಪ್ 10 ಸ್ಥಾನ ಮುಟ್ಟುವುದು ದೂರವಿಲ್ಲ.
 
 ಇಂಗ್ಲೆಂಡ್ ವಿರುದ್ಧ ಆರಂಭದ ಟೆಸ್ಟ್‌ನಲ್ಲಿ 10 ವಿಕೆಟ್ ಕಬಳಿಸಿದ ಯಾಸಿರ್ ಶಾಹ್ ನಂಬರ್ ಒನ್ ಶ್ರೇಯಾಂಕ ಅಲಂಕರಿಸಿದ್ದರು. ಆದರೆ ಅಶ್ವಿನ್ ವೆಸ್ಟ್ ಇಂಡೀಸ್ ವಿರುದ್ಧ ಏಳು ವಿಕೆಟ್ ಕಬಳಿಸುವ ಮೂಲಕ ಪಟ್ಟಿಯಲ್ಲಿ ಶಾಹ್ ಅವರನ್ನು ಹಿಂದೂಡಿ ಅಗ್ರಸ್ಥಾನಕ್ಕೆ ಏರಿದರು. ಯಾಸಿರ್ ಎರಡನೇ ಟೆಸ್ಟ್‌ನಲ್ಲಿ ಒಂದು ವಿಕೆಟ್ ಮಾತ್ರ ತೆಗೆಯಲು ಸಾಧ್ಯವಾಗಿ ಆಂಡರ್‌ಸನ್, ಸ್ಟುವರ್ಟ್ ಬ್ರಾಡ್ ಮತ್ತು ಡೇಲ್ ಸ್ಟೇನ್ ಅವರಿಗಿಂತ ಕೆಳಗೆ ಸರಿದು 5ನೇ ಸ್ಥಾನಕ್ಕೆ ಕುಸಿದಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ