ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ ಈಗ ಕಿಂಗ್!

ಗುರುವಾರ, 22 ಡಿಸೆಂಬರ್ 2016 (10:42 IST)
ದುಬೈ: 1974 ರ ಕಾಲದಲ್ಲಿ ವಿಶ್ವ ಬೌಲರ್ ಗಳ ಪೈಕಿ ಭಾರತದವರದ್ದೇ ಪಾರಮ್ಯವಿತ್ತು. ನಂತರ ಭಾರತೀಯರು ಬೌಲಿಂಗ್ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿದ್ದ ಉದಾಹರಣೆಯೇ ಇಲ್ಲ. ಈಗ ಮತ್ತೆ ಅಂತಹ ಕಾಲ ಬಂದಿದೆ.


ಇತ್ತೀಚೆಗೆ ಐಸಿಸಿ ಬಿಡುಗಡೆ ಮಾಡಿದ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ರವಿಚಂದ್ರನ್ ಅಶ್ವಿನ್ ನಂ.1 ಸ್ಥಾನ ಪಡೆದರೆ ರವೀಂದ್ರ ಜಡೇಜಾ ನಂ.2 ಸ್ಥಾನ ಪಡೆದಿದ್ದಾರೆ. ಭಾರತೀಯ ಬೌಲರ್ ಗಳೇ ಹೀಗೆ ಮೊದಲೆರಡು ಸ್ಥಾನ ಪಡೆದಿರುವುದು ಕ್ರಿಕೆಟ್ ಇತಿಹಾಸದಲ್ಲೇ ಕೇವಲ ಎರಡನೇ ಬಾರಿಯಷ್ಟೆ. ಇದಕ್ಕೂ ಮೊದಲೊಮ್ಮೆ ಬಿಎಸ್ ಚಂದ್ರಶೇಖರ್ ಮತ್ತು ಬಿಶನ್ ಸಿಂಗ್ ಬೇಡಿ ಅಗ್ರ ಸ್ಥಾನ ಪಡೆದ ಸಾಧನೆ ಮಾಡಿದ್ದರು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ 5 ಪಂದ್ಯಗಳಿಂದ ಅಶ್ವಿನ್ 28 ವಿಕೆಟ್ ಪಡೆದರೆ, ಜಡೇಜಾ 25 ವಿಕೆಟ್ ಕಿತ್ತಿದ್ದಾರೆ. ರವಿಚಂದ್ರನ್ ಅಶ್ವಿನ್ ಆಲ್ ರೌಂಡರ್ ಪಟ್ಟಿಯಲ್ಲೂ ನಂ.1 ಆಗಿದ್ದರೆ, ಜಡೇಜಾ ಒಂದು ಸ್ಥಾನ ಮೇಲೇರಿ ಜೀವನ ಶ್ರೇಷ್ಠ ಮೂರನೇ ಸ್ಥಾನ ಪಡೆದಿದ್ದಾರೆ. ಟೆಸ್ಟ್ ತಂಡಗಳ ಪೈಕಿಯೂ ಭಾರತ ನಂ.1 ಸ್ಥಾನದಲ್ಲಿದೆ. ಈಗ ಹೇಳಿ ಭಾರತೀಯರೇ ವಿಶ್ವ ಕ್ರಿಕೆಟ್ ನ ಕಿಂಗ್ ಅಲ್ವೇ?

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ