ಆಸ್ಟ್ರೇಲಿಯಾಗೆ ಬಂದ ಮೇಲೆ ಕ್ರಿಕೆಟಿಗರು ಕ್ವಾರಂಟೈನ್ ಅವಧಿಯಲ್ಲಿದ್ದಾರೆ. ಇದೇ ವೇಳೆ ಅಶ್ವಿನ್ ತಮ್ಮ ಪತ್ನಿಯೊಂದಿಗೆ ವಿವಾಹ ವಾರ್ಷಿಕೋತ್ಸವವನ್ನೂ ಆಚರಿಸಿಕೊಂಡಿದ್ದಾರೆ. ಈ ಕ್ಷಣದ ಫನ್ನಿ ಫೋಟೋವೊಂದನ್ನು ಅಶ್ವಿನ್ ಪತ್ನಿ ಪ್ರೀತಿ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಈ ಫೋಟೋದಲ್ಲಿ ಪ್ರೀತಿ ಅಶ್ವಿನ್ ಕುತ್ತಿಗೆ ಹಿಸುಕುತ್ತಿರುವ ದೃಶ್ಯವಿದ್ದು, ಇದರ ಜತೆಗೆ ವಿವಾಹ ವಾರ್ಷಿಕೋತ್ಸವದ ದಿನ ಕ್ವಾರಂಟೈನ್ ಆಗಿರುವುದಕ್ಕಿಂತ ದೊಡ್ಡ ವಿಶೇಷ ಇನ್ನೇನಿದೆ? ಎಸ್ಕೇಪ್ ಆಗಲು ಬೇರೆ ದಾರಿಯೇ ಇಲ್ಲ ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.