ವಿರಾಟ್ ಕೊಹ್ಲಿಗಾಗಿ ಮ್ಯಾಂಚೆಸ್ಟರ್ ಗೆ ಬರಲಿದೆ ಆರ್ ಸಿಬಿಯ ವಿಶೇಷ ವಿಮಾನ

ಶನಿವಾರ, 11 ಸೆಪ್ಟಂಬರ್ 2021 (12:27 IST)
ಮ್ಯಾಂಚೆಸ್ಟರ್ : ಕೋವಿಡ್ ಕಾರಣದಿಂದ ಭಾರತ ಮತ್ತು ಇಂಗ್ಲೆಂಡ್ ನಡುವಿನ ಅಂತಿಮ ಟೆಸ್ಟ್ ಪಂದ್ಯ ರದ್ದಾಗಿದೆ. ಹೀಗಾಗಿ ಭಾರತೀಯ ಆಟಗಾರರು ಐಪಿಎಲ್ ನತ್ತ ಮುಖ ಮಾಡಿದ್ದಾರೆ. ಸೆ.19ರಿಂದ ಯುಎಇ ನಲ್ಲಿ ಐಪಿಎಲ್ ನ ಮುಂದಿನ ಭಾಗ ಆರಂಭವಾಗಲಿದೆ.

ಸದ್ಯ ಮ್ಯಾಂಚೆಸ್ಟರ್ ನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಸದಸ್ಯರಾದ ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಗಾಗಿ ಫ್ರಾಂಚೈಸಿ ವಿಶೇಷ ವ್ಯವಸ್ಥೆ ಮಾಡಿದೆ.
ವಿರಾಟ್ ಕೊಹ್ಲಿ ಮತ್ತು ಮೊಹಮ್ಮದ್ ಸಿರಾಜ್ ಅವರನ್ನು ಭಾನುವಾರ ಬೆಳಿಗ್ಗೆ ಮ್ಯಾಂಚೆಸ್ಟರ್ನಿಂದ ದುಬೈಗೆ ಕರೆತರಲು ಆರ್ ಸಿಬಿ ಚಾರ್ಟರ್ ವಿಮಾನದ ವ್ಯವಸ್ಥೆ ಮಾಡಿದೆ. ಆದರೆ ಇವರು ತಂಡದ ಬಯೋ ಬಬಲ್ ಸೇರುವ ಮೊದಲು ಆರು ದಿನಗಳ ಕ್ವಾರಂಟೈನ್ ಅವಧಿ ಪೂರ್ಣಗೊಳಿಸಬೇಕಿದೆ. ವಿರಾಟ್ ಮತ್ತು ಸಿರಾಜ್ ಅವರು ಶನಿವಾರ ರಾತ್ರಿ ಚಾರ್ಟರ್ ವಿಮಾನದಲ್ಲಿ ಮ್ಯಾಂಚೆಸ್ಟರ್ನಿಂದ ಹೊರಟು ಭಾನುವಾರ ಮುಂಜಾನೆ ದುಬೈ ತಲುಪಲಿದ್ದಾರೆ ಎಂದು ಆರ್ ಸಿಬಿ ಫ್ರ್ಯಾಂಚೈಸ್ ನ ಮೂಲಗಳು ಮಾಹಿತಿ ನೀಡಿದೆ.
ಯುಎಸ್ ಓಪನ್ ಫೈನಲ್ ತಲುಪಿ ರೋಜರ್ ಫೆಡರರ್ ದಾಖಲೆ ಸರಿಗಟ್ಟಿದ ಜೊಕೊವಿಕ್
ಕೋವಿಡ್ -19 ಹಿನ್ನೆಲೆಯಲ್ಲಿ ಈ ವರ್ಷದ ಮೇ ತಿಂಗಳಲ್ಲಿ ಮುಂದೂಡಲ್ಪಟ್ಟಿದ್ದ ಐಪಿಎಲ್ನ 14 ನೇ ಸೀಸನ್ ಸೆಪ್ಟೆಂಬರ್ 19 ರಂದು ದುಬೈನಲ್ಲಿ ಪುನರಾರಂಭಗೊಳ್ಳಲಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಮೊದಲ ಪಂದ್ಯ ನಡೆಯಲಿದೆ.
ಆರ್ ಸಿಬಿ ಯು ತನ್ನ ಮೊದಲ ಪಂದ್ಯವನ್ನು ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಸೆ.20ರಂದು ಆಡಲಿದೆ. ಒಟ್ಟಾರೆಯಾಗಿ ಮುಂದುವರಿದ ಐಪಿಎಲ್ ನ 13 ಪಂದ್ಯಗಳು ದುಬೈನಲ್ಲಿ, 10 ಶಾರ್ಜಾದಲ್ಲಿ ಮತ್ತು 8 ಪಂದ್ಯಗಳು ಅಬುಧಾಬಿಯಲ್ಲಿ ನಡೆಯಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ