ಗುಟ್ಟು ರಟ್ಟು: ಈ ತಿಂಗಳಲ್ಲಿ ಸಪ್ತಪದಿ ತುಳಿಯುತ್ತಾರಂತೆ ಯುವಿ!

ಮಂಗಳವಾರ, 6 ಸೆಪ್ಟಂಬರ್ 2016 (12:20 IST)
ಸ್ಪೋಟಕ ಬ್ಯಾಟ್ಸ್‌ಮನ್, 2011ರ ವಿಶ್ವಕಪ್ ಹೀರೋ ಯುವರಾಜ್ ಸಿಂಗ್ ಯಾವಾಗ ವಿವಾಹ ಬಂಧನಕ್ಕೊಳಗಾಗುತ್ತಾರೆ ಎಂದು ಅವರ ಅಭಿಮಾನಿಗಳು ಬಹುಕಾಲದಿಂದ ಇಟ್ಟುಕೊಂಡ ನಿರೀಕ್ಷೆಗೆ ಈಗ ತೆರೆ ಬಿದ್ದಿದೆ. ವರ್ಷಾಂತ್ಯದಲ್ಲಿ  ತಾವು ವಿವಾಹ ಬಂಧನಕ್ಕೊಳಗಾಗಲಿದ್ದೇನೆ ಎಂದು ಸ್ವತಃ ಯುವಿ ಬಾಯ್ಬಿಟ್ಟಿದ್ದಾರೆ.

 
ಇತ್ತೀಚಿಗೆ ಬಾಲಿವುಡ್, ಕ್ರಿಕೆಟ್ ಸ್ಟಾರ್‌ಗಳೆಲ್ಲ ಸೇರಿದ್ದ ಸಮಾರಂಭವೊಂದರಲ್ಲಿ ಭಾಗವಹಿಸಿದ್ದ ಯುವರಾಜ್ ಸಿಂಗ್, ತಮ್ಮ ಹೊಸ 
ಬಟ್ಟೆ ಲೇಬಲ್ ವೈಡಬ್ಲ್ಯೂಸಿಯನ್ನು ಅನಾವರಣಗೊಳಿಸಿದರು.  ಆ ಸಂದರ್ಭದಲ್ಲಿ ಅವರ ಭಾವಿ ಪತ್ನಿ ಹೇಜಲ್ ಕೀಚ್ ಸಹ ಹಾಜರಿದ್ದರು. ಈ ವೇಳೆಯಲ್ಲಿ ಇತರ ಸೆಲೆಬ್ರಿಟಿಗಳೊಂದಿಗೆ ಹೇಜಲ್ ಸಹ ರಾಂಪ್‌ಗೆ ಹೆಜ್ಜೆ ಹಾಕಿದರು. 
 
ಈ ಸಂದರ್ಭದಲ್ಲಿ ಯುವಿ ತಾವು ಡಿಸೆಂಬರ್ ತಿಂಗಳ ಆರಂಭದಲ್ಲಿ ಮದುವೆಯಾಗುವುದಾಗಿ ಘೋಷಿಸಿದರು ಎಂದು ವರದಿಯಾಗಿದೆ. 
 
ಕಳೆದ ವರ್ಷ ನವೆಂಬರ್ ತಿಂಗಳಲ್ಲಿ ಹೇಜರ್ ಮತ್ತು ಯುವಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು.
 
ಈ ಹಿಂದೆ ಯುವಿ ಬಾಲಿವುಡ್ ಸ್ಟಾರ್ ಕಿಮ್ ಶರ್ಮಾ ಜತೆ ಸಹ ಡೇಟಿಂಗ್ ಮಾಡಿದ್ದರು. ದೀಪಿಕಾ ಪಡುಕೋಣೆ ಜತೆಗೂ ಅವರ ಹೆಸರು ಥಳಕು ಹಾಕಿಕೊಂಡಿತ್ತು. 


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ .

ವೆಬ್ದುನಿಯಾವನ್ನು ಓದಿ