ವಿಕೆಟ್‌ ಹಿಂದೆ ಧೋನಿ ದ್ವಿಶತಕ: ಲಖನೌ ವಿರುದ್ಧದ ಐಪಿಎಲ್‌ ಪಂದ್ಯದಲ್ಲಿ ವಿಶ್ವದಾಖಲೆ ಬರೆದ ಮಹಿ

Sampriya

ಮಂಗಳವಾರ, 15 ಏಪ್ರಿಲ್ 2025 (15:24 IST)
Photo Courtesy X
ಚೆನ್ನೈ: ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು ಸೋಮವಾರ ನಡೆದ ಐ‍ಪಿಎಲ್‌ನ ಪಂದ್ಯದಲ್ಲಿ ಐದು ವಿಕೆಟ್‌ಗಳಿಂದ ಲಖನೌ ಸೂಪರ್‌ ಜೈಂಟ್ಸ್‌ ತಂಡವನ್ನು ಮಣಿಸಿ, ಸತತ ಐದು ಪಂದ್ಯಗಳ ಸೋಲಿನ ಸರಪಳಿಯಿಂದ ಹೊರಬಂತು. ಜೊತೆಗೆ ಚೆನ್ನೈ ತಂಡದ ನಾಯಕ ಮಹೇಂದ್ರ ಸಿಂಗ್‌ ಧೋನಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿದರು.

ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 43 ವರ್ಷದ ಎಂಎಸ್ ಧೋನಿ ಕೀಪಿಂಗ್‌ನಲ್ಲಿ ಮತ್ತು ಬ್ಯಾಟಿಂಗ್‌ನಲ್ಲಿ ಮಿಂದಿದ್ದಾರೆ. ಅವರ ಅದ್ಭುತ ಪ್ರದರ್ಶನಕ್ಕಾಗಿ ಪಂದ್ಯದ ಆಟಗಾರ ಗೌರವಕ್ಕೆ ಪಾತ್ರವಾದರು.

ಈ ಪಂದ್ಯದಲ್ಲಿ  ಧೋನಿ ಅವರು ವಿಕೆಟ್‌ನ ಹಿಂದೆ ಈತನಕ ಯಾರೂ ಮಾಡದ ಸಾಧನೆ ಮಾಡಿದ್ದಾರೆ.  ಲಕ್ನೋ ಆಟಗಾರ ಆಯುಷ್ ಬದೋನಿ ಅವರು ಸ್ಟಂಪ್ ಮಾಡಿದ ಬೆನ್ನಲ್ಲೇ ಧೋನಿ, ಐಪಿಎಲ್ ಇತಿಹಾಸದಲ್ಲಿ ಚರಿತ್ರೆ ಸೃಷ್ಟಿಸಿದ್ದಾರೆ.  ಐಪಿಎಲ್​ನಲ್ಲಿ 200 ಕ್ಯಾಚ್‌ ಮತ್ತು ಸ್ಟಂಪ್‌ ಮಾಡಿದ ಮೊದಲ ವಿಕೆಟ್ ಕೀಪರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಧೋನಿ ಬಿಟ್ಟರೆ ಯಾವೊಬ್ಬ ವಿಕೆಟ್ ಕೀಪರ್​ ಕೂಡ ಈ ಸಾಧನೆ ಮಾಡಿಲ್ಲ. ದಿನೇಶ್ ಕಾರ್ತಿಕ್ ಎರಡನೇ ಸ್ಥಾನದಲ್ಲಿದ್ದಾರೆ. ಐಪಿಎಲ್​ನಲ್ಲಿ ಇದು ಧೋನಿ ಅವರ 46ನೇ ಸ್ಟಂಪ್. ಇದರಲ್ಲೂ ಅವರೇ ಮುಂದಿದ್ದಾರೆ. ಈ ಐಪಿಎಲ್​ನಲ್ಲಿ ಆಡಿರುವ 7 ಪಂದ್ಯಗಳಲ್ಲಿ 4 ಸ್ಟಂಪ್ ಮಾಡುವ ಗಮನ ಸೆಳೆದಿದ್ದಾರೆ.

ಈ ಪಂದ್ಯದಲ್ಲಿ ಧೋನಿ ಅವರು 11 ಎಸೆತಗಳಲ್ಲಿ 4 ಬೌಂಡರಿ ಮತ್ತು 1 ಸಿಕ್ಸರ್‌ನೊಂದಿಗೆ 26 ರನ್ ಗಳಿಸಿ ಅಜೇಯರಾಗಿ ಉಳಿದರು. ಲೀಗ್ ಇತಿಹಾಸದಲ್ಲಿ 43 ನೇ ವಯಸ್ಸಿನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದ ಮೊದಲ ಆಟಗಾರರಾದರು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ