ಮತ್ತೆ ಶುರುವಾಯ್ತು ಕೊಹ್ಲಿಗಿಂತ ರೋಹಿತ್ ಶರ್ಮಾನೇ ಬೆಸ್ಟ್ ಕ್ಯಾಪ್ಟನ್ ಎಂಬ ವರಸೆ
ಇದೀಗ ಈ ವಾದಕ್ಕೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಚಾಲನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಗಂಭೀರ್ ‘ನನ್ನ ಪ್ರಕಾರ ರೋಹಿತ್ ಗೆ ಟೀಂ ಇಂಡಿಯಾ ಮುನ್ನಡೆಸುವ ಕ್ಷಮತೆಯಿದೆ. ಅವರು ನಾಲ್ಕು ಐಪಿಎಲ್ ಟ್ರೋಫಿ ಗೆದ್ದಿದ್ದಾರೆ ಎಂಬುದೊಂದೇ ಕಾರಣವಲ್ಲ. ಇದಕ್ಕೂ ಮೊದಲು ಟೀಂ ಇಂಡಿಯಾದಲ್ಲೂ ನಾಯಕರಾಗಿ ಏಷ್ಯಾ ಕಪ್ ನಂತಹ ಪ್ರತಿಷ್ಠಿತ ಟೂರ್ನಿಯನ್ನು ಗೆಲ್ಲಿಸಿಕೊಟ್ಟಿದ್ದಾರೆ. ಹಾಗಾಗಿ ನನ್ನ ಪ್ರಕಾರ ಕೊಹ್ಲಿಯ ನಂತರದ ಸ್ಥಾನ ರೋಹಿತ್ ಗೆ’ ಎಂದು ಗಂಭೀರ್ ಹೇಳಿಕೊಂಡಿದ್ದಾರೆ.