ಅವಕಾಶ ಕೊಟ್ಟರೆ ಯಜುವೇಂದ್ರ ಚಾಹಲ್ ಇಂದು ದಾಖಲೆ ಮಾಡೋದು ಗ್ಯಾರಂಟಿ

ಭಾನುವಾರ, 3 ನವೆಂಬರ್ 2019 (09:02 IST)
ನವದೆಹಲಿ: 2019 ರ ವಿಶ್ವಕಪ್ ಮುಗಿದ ಬಳಿಕ ಟೀಂ ಇಂಡಿಯಾದಲ್ಲಿ ಸ್ಪಿನ್ನರ್ ಯಜುವೇಂದ್ರ ಚಾಹಲ್ ಗೆ ಸರಿಯಾದ ಅವಕಾಶವೇ ಸಿಕ್ಕಿಲ್ಲ. ಹಲವು ಯುವ ಸ್ಪಿನ್ನರ್ ಗಳನ್ನು ಆಡಿಸುವ ಮೂಲಕ ಟೀಂ ಇಂಡಿಯಾ ಚಿಂತಕರ ಚಾವಡಿ ಪ್ರಯೋಗಕ್ಕೆ ಮಣೆ ಹಾಕಿದೆ.


ಹೀಗಾಗಿ ಚಾಹಲ್ ಅವಕಾಶ ಕಳೆದುಕೊಂಡಿದ್ದಾರೆ. ಇಂದು ನಡೆಯಲಿರುವ ಟಿ20 ಪಂದ್ಯದಲ್ಲಿ ಅಥವಾ ಈ ಸರಣಿಯಲ್ಲಿ ಆಡುವ ಅವಕಾಶ ಸಿಕ್ಕರೆ ಚಾಹಲ್ ಗೆ ಭಾರತೀಯ ದಾಖಲೆಯೊಂದನ್ನು ಮಾಡುವ ಅವಕಾಶ ಸಿಕ್ಕಿದೆ.

ಟಿ20 ಪಂದ್ಯಗಳಲ್ಲಿ ಚಾಹಲ್ 50 ವಿಕೆಟ್ ಪೂರ್ತಿಗೊಳಿಸಲು ಚಾಹಲ್ ಗೆ 4 ವಿಕೆಟ್ ಗಳ ಅಗತ್ಯವಿದೆ. ಈ ಸರಣಿಯಲ್ಲಿ ಅವರು ಆ ಸಾಧನೆ ಮಾಡಿದರೆ ರವಿಚಂದ್ರನ್ ಅಶ್ವಿನ್ ಮತ್ತು ಜಸ್ಪ್ರೀತ್ ಬುಮ್ರಾ ಬಳಿಕ ಈ ಸಾಧನೆ ಮಾಡಿದ ಮೂರನೇ ಭಾರತೀಯ ಬೌಲರ್ ಎನಿಸಿಕೊಳ್ಳಲಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ