ಮುಂಬೈನ ಖಂಡಾಲಾದಲ್ಲಿ 5 ಕೋಟಿ ರೂ.ಗೆ ವಿಲ್ಲಾ ಖರೀದಿಸಿದ ರೋಹಿತ್ ಶರ್ಮಾ

ಬುಧವಾರ, 18 ಮೇ 2016 (20:18 IST)
ಪ್ರಸಕ್ತ ಮುಂಬೈ ಇಂಡಿಯನ್ಸ್ ಟೀಂ ನಾಯಕರಾಗಿರುವ ರೋಹಿತ್ ಶರ್ಮಾ ಖಂಡಾಲಾದಲ್ಲಿ ವಿಲ್ಲಾವೊಂದನ್ನು 5 ಕೋಟಿ ರೂ.ಗೆ ಖರೀದಿಸಿದ್ದಾರೆ. ಸುನೀಲ್ ಶೆಟ್ಟಿ ಕಂಪನಿ ಮಾಲೀಕತ್ವದ ಡಿಸ್ಕವರಿ ಎಂಬ ಹೆಸರಿನ ವಸತಿ ಯೋಜನೆಯಲ್ಲಿ ಕ್ರಿಕೆಟರ್ ಕೆಲವು ಸಮಯದ ಹಿಂದೆ ಬಂಗ್ಲೆಯೊಂದನ್ನು ಖರೀದಿಸಿದರು.
 
 ಬಂಗ್ಲೆಯ ಒಟ್ಟು ವಿಸ್ತೀರ್ಣ 7500 ಚದರ ಅಡಿಗಳಾಗಿದ್ದು ಪ್ರಸಕ್ತ ನಿರ್ಮಾಣ ಹಂತದಲ್ಲಿದೆ. ಇದು 5 ಬಿಎಚ್‌ಕೆ ವಿಲ್ಲಾ ಆಗಿದ್ದು, ಲಾನ್ ಮತ್ತು ಈಜುಕೊಳ ಹೊಂದಿದೆ. ನಿವೇಶನದ ಒಟ್ಟು ವಿಸ್ತೀರ್ಣ 10,000 ಚದರ ಅಡಿ. 
 
 ಸುನೀಲ್ ಶೆಟ್ಟಿ ಖಂಡಾಲಾದಲ್ಲಿ ಡಿಸ್ಕವರಿ ಎಂಬ ಹೆಸರಿನ ಭಾರೀ ಪ್ರಾಜೆಕ್ಟ್ ಹೊಂದಿದ್ದು, ಏಳು ಎಕರೆಯಲ್ಲಿ 21 ಬಂಗ್ಲೆಗಳಿಂದ ಕೂಡಿದೆ. ಪ್ರತಿಯೊಂದು ವಿಲ್ಲಾ ಖಾಸಗಿ ಟೆರೇಸ್ ಹೊಂದಿದ್ದು, ಎಸ್2 ರಿಯಾಲಿಟಿಗೆ ಈ ಯೋಜನೆ ಸೇರಿದ್ದು, ಸುನೀಲ್, ಅವರ ಪತ್ನಿ ಮಾನಾ ಮತ್ತಿತರರು ಮಾಲೀಕರಾಗಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ