ಬೌಲಿಂಗ್ ಮಾಡದೇ ಇರುವುದಕ್ಕೆ ಕಾರಣ ತಿಳಿಸಿದ ರೋಹಿತ್ ಶರ್ಮಾ

ಬುಧವಾರ, 13 ಮೇ 2020 (09:31 IST)
ಮುಂಬೈ: ರೋಹಿತ್ ಶರ್ಮಾ ಬ್ಯಾಟ್ಸ್ ಮನ್ ಆಗಿದ್ದರೂ ಅಗತ್ಯ ಬಂದಾಗ ಬೌಲಿಂಗ್ ಕೂಡಾ ಮಾಡಬಲ್ಲರು. ಆದರೆ ಇತ್ತೀಚೆಗೆ ಅವರು ಬೌಲಿಂಗ್ ಮಾಡುವುದೇ ಇಲ್ಲ. ಇದಕ್ಕೆ ಕಾರಣವೇನೆಂದು ಅವರೇ ಹೇಳಿದ್ದಾರೆ.


ನನ್ನ ಬೆರಳಿಗೆ ಗಾಯವಾದ ಬಳಿಕ ನನಗೆ ಬಾಲ್ ಗ್ರಿಪ್ ಮಾಡುವುದು ಕಷ್ಟವಾಗುತ್ತಿದೆ. ಆದರೆ ಬೌಲಿಂಗ್ ಮಾಡುವುದನ್ನು ಮಿಸ್ ಮಾಡಿಕೊಳ್ಳುತ್ತೇನೆ ಎಂದು ರೋಹಿತ್ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ರೋಹಿತ್ ಐಪಿಎಲ್ ನಲ್ಲಿ ಹ್ಯಾಟ್ರಿಕ್ ವಿಕೆಟ್ ಕಬಳಿಸಿದ ಸಾಧನೆಯನ್ನು ಮಾಡಿದ್ದರು. ಟೆಸ್ಟ್ ಕ್ರಿಕೆಟ್ ನಲ್ಲಿ ಎರಡು, ಏಕದಿನ ಪಂದ್ಯಗಳಲ್ಲಿ 8 ಮತ್ತು ಟಿ20 ಕ್ರಿಕೆಟ್ ನಲ್ಲಿ ಒಂದು ವಿಕೆಟ್ ಕಬಳಿಸಿದ ಸಾಧನೆ ಇವರದ್ದಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ