ಎಡಿಟ್ ಮಾಡಿದ ರಾಷ್ಟ್ರಧ್ವಜದ ಫೋಟೋ ಹಾಕಿದ್ರಾ? ಮತ್ತೆ ಟ್ರೋಲ್ ಆದ ರೋಹಿತ್ ಶರ್ಮಾ
ಇದರ ಬೆನ್ನಲ್ಲೇ ರೋಹಿತ್ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಭಾರತೀಯ ಧ್ವಜ ಹಿಡಿದ ಫೋಟೋ ಪ್ರಕಟಿಸಿ ನಾನು ಯಾವತ್ತೂ ನನ್ನ ರಾಷ್ಟ್ರವನ್ನು ಪ್ರತಿನಿಧಿಸುತ್ತೇನೆ. ನನ್ನ ದೇಶ ಪ್ರತಿನಿಧಿಸಿ ಆಡುತ್ತೇನೆ ಎನ್ನುವ ಹೆಮ್ಮೆ ನನಗಿದೆ ಎಂದು ರೋಹಿತ್ ಪ್ರಕಟಿಸಿದ್ದರು.
ಆದರೆ ಈ ಫೋಟೋದಲ್ಲಿ ರೋಹಿತ್ ಎಡಿಟ್ ಮಾಡಿರುವ ರಾಷ್ಟ್ರಧ್ವಜ ಪ್ರಕಟಿಸಿದ್ದಾರೆ ಎಂದು ಮತ್ತೆ ಟ್ರೋಲ್ ಗೊಳಗಾಗಿದ್ದಾರೆ. ಟೀಕೆಗೊಳಗಾದ ಬಳಿಕ ತೇಪೆ ಹಚ್ಚಲು ಈ ರೀತಿ ಫೋಟೋ ಹಾಕಿದ್ದಾರೆ ಎಂದು ಕೆಲವರು ವ್ಯಂಗ್ಯ ಮಾಡಿದ್ದಾರೆ.