ಬೆಂಗಳೂರು: ನಾಲ್ಕನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಆರಂಭಿಕ ರೋಹಿತ್ ಶರ್ಮಾ ಎದುರಾಳಿ ಆಟಗಾರನ ಎಡವಟ್ಟಿನಿಂದ ತಲೆಗೆ ಗಂಭೀರ ಗಾಯವಾಗುವುದನ್ನು ತಪ್ಪಿಸಿಕೊಂಡಿದ್ದಾರೆ.
16 ನೇ ಓವರ್ ನಲ್ಲಿ ಅಜಿಂಕ್ಯಾ ರೆಹಾನೆ ಜತೆ ಬ್ಯಾಟಿಂಗ್ ಮಾಡುತ್ತಿದ್ದ ರೋಹಿತ್ ಸಿಂಗಲ್ಸ್ ಓಡಿ ನಾನ್ ಸ್ಟ್ರೈಕರ್ ಎಂಡ್ ತಲುಪಿದ್ದರು. ಈ ಸಂದರ್ಭದಲ್ಲಿ ಬಾಲ್ ಕಲೆಕ್ಟ್ ಮಾಡಿದ ಆಸ್ಟ್ರೇಲಿಯಾ ವಿಕೆಟ್ ಕೀಪರ್ ಮ್ಯಾಥ್ಯೂ ವೇಡ್ ನಾನ್ ಸ್ಟ್ರೈಕರ್ ಕಡೆಗೆ ಬಾಲ್ ಎಸೆದರು.
ಆದರೆ ಅದು ತಪ್ಪಿ ರೋಹಿತ್ ತಲೆಗೆ ಬಡಿದಿತ್ತು. ಅದೃಷ್ಟವಶಾತ್ ರೋಹಿತ್ ತಲೆ ಮೇಲೆ ಹೆಲ್ಮೆಟ್ ಇದ್ದ ಕಾರಣ ಹೆಚ್ಚಿನ ಅಪಾಯವಾಗಲಿಲ್ಲ. ತಕ್ಷಣ ರೋಹಿತ್ ಬಳಿ ಬಂದ ವಿಕೆಟ್ ಕೀಪರ್ ವೇಡ್ ಕ್ಷಮೆ ಕೋರಿದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ