ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ವಿರುದ್ಧ 6 ವಿಕೆಟ್ ಸೋಲಿನ ಬಳಿಕ ಡೆಲ್ಲಿ ಡೇರ್ ಡೆವಿಲ್ಸ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕ್ವಿಂಟನ್ ಡಿ ಕಾಕ್ ಎದುರಾಳಿ ತಂಡವು ತಮ್ಮನ್ನು 138 ರನ್ ಸಾಧಾರಣ ಮೊತ್ತಕ್ಕೆ ನಿರ್ಬಂಧಿಸಿದ ಆಟದ ಯೋಜನೆಯನ್ನು ಶ್ಲಾಘಿಸಿದರು ಮತ್ತು ವಿಶೇಷವಾಗಿ ಸ್ಪಿನ್ನರುಗಳು ತುಂಬಾ ಒತ್ತಡವನ್ನು ಹಾಕಿದರು ಮತ್ತು ಅವರ ಬೌಲಿಂಗ್ ಬದಲಾವಣೆ ಕೂಡ ಉತ್ತಮವಾಗಿತ್ತು ಎಂದು ಪ್ರತಿಕ್ರಿಯಿಸಿದ್ದಾರೆ.
ನಾವು ಇನ್ನೂ 20 ರನ್ ಹೆಚ್ಚು ಗಳಿಸಿದ್ದರೆ, ನಾವು 160 ರನ್ ಗಳಿಸುತ್ತಿದ್ದೆವು. ಆದರೆ ಡೆತ್ ಓವರುಗಳಲ್ಲಿ ಅವರು ಚೆನ್ನಾಗಿ ಬೌಲ್ ಮಾಡಿದ್ದರಿಂದ ನಾವು ಸೋಲಪ್ಪಿದೆವು ಎಂದು ಅವರು ಪ್ರತಿಪಾದಿಸಿದರು. ಡಿ ಕಾಕ್ ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿಯನ್ನು ಕೂಡ ಶ್ಲಾಘಿಸಿದರು. ಅವರು 45 ಎಸೆತಗಳಲ್ಲಿ 54 ಅಜೇಯ ರನ್ ಬಾರಿಸಿದರು.