ಇಂಡಿಯನ್ ಐಡಲ್ ಶೋಗೆ ಹೋಗಿ ಟೀಕೆಗೊಳಗಾದ ಸಚಿನ್ ತೆಂಡುಲ್ಕರ್

ಶನಿವಾರ, 2 ನವೆಂಬರ್ 2019 (08:13 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಇಂಡಿಯನ್ ಐಡಲ್ ರಿಯಾಲಿಟಿ ಶೋನಲ್ಲಿ ಪಾಲ್ಗೊಂಡಿದ್ದಲ್ಲದೆ ಶೋ ಬಗ್ಗೆ ಹೊಗಳಿ ಟ್ವೀಟ್ ಮಾಡಿದ್ದಕ್ಕೆ ಟೀಕೆಗೊಳಗಾಗಿದ್ದಾರೆ.


ಅಷ್ಟಕ್ಕೂ ಸಚಿನ್ ಇಂತಹದ್ದೊಂದು ಹಾಡಿನ ಶೋನಲ್ಲಿ ಭಾಗವಹಿಸಿದ್ದಕ್ಕೆ ಟೀಕೆಗೊಳಗಾಗಿದ್ದು ಯಾಕೆ ಗೊತ್ತಾ? ಈ ಶೋನಲ್ಲಿ ತೀರ್ಪುಗಾರರಾಗಿ ಅನು ಮಲಿಕ್ ಇದ್ದಾರೆ. ಅವರು ಹಿಂದೆ ಮೀ ಟೂ ಅಭಿನಯಾನದಡಿಯಲ್ಲಿ ಲೈಂಗಿಕ ಕಿರುಕುಳ ಆರೋಪಕ್ಕೊಳಗಾದವರು.

ಹಲವರು ಅನು ಮಲಿಕ್ ರ ಕಿರುಕುಳದ ಬಗ್ಗೆ ಬಹಿರಂಗವಾಗಿ ಧ್ವನಿಯೆತ್ತಿದ್ದರು. ಇದೀಗ ಅಂತಹ ಶೋನಲ್ಲಿ ಅನು ಮಲಿಕ್ ಜತೆ ಪಾಲ್ಗೊಂಡಿದ್ದಕ್ಕೆ ಸಚಿನ್ ಟೀಕೆಗೊಳಗಾಗಿದ್ದಾರೆ. ನಿಮಗೆ ಇಂತಹ ವ್ಯಕ್ತಿ ಜತೆ ವೇದಿಕೆ ಹಂಚಿಕೊಳ್ಳುವ ಮೊದಲು ಅವರ ಮೇಲಿನ ಆರೋಪಗಳು ನೆನಪಾಗಲಿಲ್ಲವೇ ಎಂದು ಗಾಯಕಿ ಸೋನಾ ಮಹಾಪಾತ್ರ ಟೀಕಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ