ಹುತಾತ್ಮ ಯೋಧರಿಗೆ ದೇಣಿಗೆ ಸಂಗ್ರಹಿಸಲು ಈ ಕೆಲಸ ಮಾಡಿದರು ಸಚಿನ್ ತೆಂಡುಲ್ಕರ್!

ಸೋಮವಾರ, 25 ಫೆಬ್ರವರಿ 2019 (09:21 IST)
ಮುಂಬೈ: ಮೊನ್ನೆಯಷ್ಟೇ ಪುಲ್ವಾಮಾದಲ್ಲಿ ಉಗ್ರರ ದಾಳಿಗೆ ಹುತಾತ್ಮರಾದ ಭಾರತೀಯ ಯೋಧರಿಗೆ ನೆರವಾಗಲು ಸಚಿನ್ ತೆಂಡುಲ್ಕರ್ ತಮ್ಮ ದೇಹ ದಂಡಿಸಿಕೊಂಡಿದ್ದಾರೆ.


ಪುಲ್ವಾಮಾದಲ್ಲಿ ಹುತಾತ್ಮರಾದ ಯೋಧರು ಸೇರಿದಂತೆ ಹುತಾತ್ಮ ಯೋಧರಿಗೆ ನೆರವಾಗುವಂತಹ ಭಾರತ್ ಕೇ ವೀರ್ ಫಂಡ್ ಗೆ ದೇಣಿಗೆ ಸಂಗ್ರಹಿಸಲು ಸಚಿನ್ ದೆಹಲಿಯಲ್ಲಿ ನಡೆದ ಮ್ಯಾರಥಾನ್ ವೇಳೆ ಪುಶ್ ಅಪ್ ಚಾಲೆಂಜ್ ಮಾಡಿದ್ದಾರೆ.

10 ಪುಶ್ ಅಪ್ ಪೂರ್ತಿಗೊಳಿಸುವ ಸವಾಲು ಸ್ವೀಕರಿಸಿದ ಸಚಿನ್ ಮ್ಯಾರಥಾನ್ ನಲ್ಲಿ ಸಾಮಾನ್ಯರಂತೆ ಪಾಲ್ಗೊಂಡು ದೇಣಿಗೆ ಸಂಗ್ರಹಿಸಿದ್ದಾರೆ. ಈ ಮೂಲಕ ಹುತಾತ್ಮ ಯೋಧರ ಕುಟುಂಬಗಳಿಗೆ ತಮ್ಮ ಕೈಲಾದ ರೀತಿಯಲ್ಲಿ ನೆರವಾಗಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸಚಿನ್ ತಮ್ಮ ಅಭಿಮಾನಿಗಳಿಗೂ ನೆರವಾಗಲು ಕೋರಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ