‘ಸರಣಿ ಗೆಲ್ಲದ ಮೇಲೆ ನನ್ನ ಶತಕಕ್ಕೆ ಮೂರು ಕಾಸಿನ ಬೆಲೆಯಿಲ್ಲ’

ಗುರುವಾರ, 18 ಜನವರಿ 2018 (08:28 IST)
ಸೆಂಚೂರಿಯನ್: ದ.ಆಫ್ರಿಕಾ ವಿರುದ್ಧ ಟೆಸ್ಟ್ ಸರಣಿ ಸೋತ ಬೇಸರದಲ್ಲಿರುವ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ನಾವು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎಂದು ಬೇಸರಿಸಿದ್ದಾರೆ.
 

ಈ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಕೊಹ್ಲಿ ಶತಕ ಗಳಿಸಿದ್ದರು. ಅವರ 153 ರನ್ ಗಳ ಇನಿಂಗ್ಸ್ ಭಾರತದ ಮಾನ ಉಳಿಸಿತ್ತು. ಪಂದ್ಯ ಮುಗಿದ ಬಳಿಕ ಕೊಹ್ಲಿ ಈ ಬಗ್ಗೆ ಮಾತನಾಡಿದ್ದಾರೆ.

‘ಒಂದು ವೇಳೆ ನಾವು ಪಂದ್ಯ ಗೆದ್ದಿದ್ದರೆ ಈ ಶತಕಕ್ಕೆ ಬೆಲೆಯಿರುತ್ತಿತ್ತು. ಇದೊಂದು ಸಂಘಟಿತ ಆಟ. ನಾವು ಒಟ್ಟಾಗಿ ಗೆಲ್ಲಬೇಕು. ಪಂದ್ಯ ಸೋತ ಮೇಲೆ ಇಂತಹ ವೈಯಕ್ತಿಕ ದಾಖಲೆಗಳು ಗಣನೆಗೆ ಬರುವುದಿಲ್ಲ’ ಎಂದು ಕೊಹ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ