ಮತ್ತೆ ಸಚಿನ್, ಯುವರಾಜ್ ಭಾರತದ ಪರ ಆಡುವುದನ್ನು ಕಣ್ತುಂಬಿಕೊಳ್ಳುವ ಯೋಗ!

ಭಾನುವಾರ, 7 ಮಾರ್ಚ್ 2021 (08:57 IST)
ಮುಂಬೈ: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್, ಯುವರಾಜ್ ಸಿಂಗ್, ಇರ್ಫಾನ್ ಪಠಾಣ್ ಮುಂತಾದವರು ಮತ್ತೆ ಮೈದಾನದಲ್ಲಿ ಕ್ರಿಕೆಟ್ ಪಂದ್ಯವಾಡುವುದನ್ನು ನೋಡಲು ಒಂದು ಸುವರ್ಣಾವಕಾಶ ದೊರೆತಿದೆ.


ಮಾರ್ಚ್ 5 ರಿಂದ ರಸ್ತೆ ಸುರಕ್ಷತೆ ಬಗ್ಗೆ ಜಾಗೃತಿ ಮೂಡಿಸುವ ರೋಡ್ ಸೇಫ್ಟೀ ಟೂರ್ನಮೆಂಟ್ ಆರಂಭವಾಗಿದೆ. ಈ ಸರಣಿಯಲ್ಲಿ ಭಾರತ, ಇಂಗ್ಲೆಂಡ್, ವೆಸ್ಟ್ ಇಂಡೀಸ್, ದ.ಆಫ್ರಿಕಾ, ಬಾಂಗ್ಲಾದೇಶ, ಶ್ರೀಲಂಕಾ ತಂಡಗಳು ಪಾಲ್ಗೊಂಡಿವೆ.

ವಿಶೇಷವೆಂದರೆ ಎಲ್ಲಾ ತಂಡಗಳಲ್ಲೂ ಹಳೆಯ ದಿಗ್ಗಜ ಕ್ರಿಕೆಟಿಗರು ಆಡುತ್ತಿದ್ದಾರೆ. ಭಾರತ ತಂಡದ ಪರ ಸಚಿನ್, ಸೆಹ್ವಾಗ್, ಯುವರಾಜ್ ರಂತಹ ಜನಪ್ರಿಯ ಆಟಗಾರರು ಆಡುತ್ತಿದ್ದಾರೆ. ಇದು ಕ್ರಿಕೆಟ್ ಪ್ರಿಯರಿಗೆ ರಸದೌತಣ ನೀಡುತ್ತಿದೆ. ಶುಕ್ರವಾರದಿಂದ ಆರಂಭವಾಗಿರುವ ಕೂಟ ಮಾರ್ಚ್ 21 ರವರೆಗೂ ನಡೆಯಲಿದೆ. ಸಂಜೆ 7 ಗಂಟೆಗೆ ಪ್ರತಿನಿತ್ಯ ಕಲರ್ಸ್ ಸಿನಿಪ್ಲೆಕ್ಸ್ ಮತ್ತು ಕಲರ್ಸ್ ರಿಷ್ತೆ ಚಾನೆಲ್ ನಲ್ಲಿ ಪಂದ್ಯದ ನೇರಪ್ರಸಾರವೂ ಇದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೆಣಸಿದ್ದ ಭಾರತ ತಂಡದ ಪರ ಸಚಿನ್-ಸೆಹ್ವಾಗ್ ಜೋಡಿ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವು ಕೊಡಿಸಿದ್ದು ನೋಡಿ ಹಿರಿಯರ ಕ್ರಿಕೆಟ್ ಟೂರ್ನಿಯನ್ನು ಹೀಗೇ ಆಗಾಗ ಆಯೋಜಿಸುತ್ತಿರಿ ಎಂದು ಪ್ರೇಕ್ಷಕರಿಂದ ಒತ್ತಾಯ ಕೇಳಿಬಂದಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ