ಭಾರತದಲ್ಲಿ ಕ್ರಿಕೆಟ್ ಟೂರ್ನಿಗೆ ನಿಷೇಧ ಹೇರಿ ಎಂದ ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್!

ಶನಿವಾರ, 28 ಡಿಸೆಂಬರ್ 2019 (08:01 IST)
ಇಸ್ಲಾಮಾಬಾದ್: ಮೊನ್ನೆಯಷ್ಟೇ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಮುಖ್ಯಸ್ಥ ಎಹಸಾನ್ ಮಣಿ ಕ್ರಿಕೆಟ್ ಗೆ ಭಾರತ ಸುರಕ್ಷಿತ ತಾಣವಲ್ಲ ಎಂದು ಭಾರತೀಯರ ಆಕ್ರೋಶಕ್ಕೆ ಕಾರಣವಾಗಿದ್ದರು. ಇದೀಗ ಅದೇ ಮಾತನ್ನು ಪಾಕ್ ಮಾಜಿ ಕ್ರಿಕೆಟಿಗ ಜಾವೇದ್ ಮಿಯಾಂದಾದ್ ಕೂಡಾ ಹೇಳಿದ್ದಾರೆ.


ಇಷ್ಟು ದಿನ ಭಯೋತ್ಪಾದನೆ ಪೋಷಿಸುತ್ತಿದೆ ಎಂಬ ಕಾರಣಕ್ಕೆ ವಿಶ್ವ ಕ್ರಿಕೆಟ್ ನಲ್ಲಿ ಮೂಲೆಗುಂಪಾಗಿದ್ದ ಪಾಕ್ ಕ್ರಿಕೆಟಿಗರು ಭಾರತದಲ್ಲಿ ನಡೆಯುತ್ತಿರುವ ಪೌರತ್ವ ಖಾಯಿದೆ ಪ್ರತಿಭಟನೆಯನ್ನೇ ತಮ್ಮ ಅಸ್ತ್ರವಾಗಿಸಿಕೊಂಡಿದ್ದಾರೆ.

ಇದೇ ನೆಪವೊಡ್ಡಿ ಭಾರತದಲ್ಲಿ ಭದ್ರತೆಯಿಲ್ಲ. ಇಲ್ಲಿ ಕ್ರಿಕೆಟ್ ಆಡುವುದು ಸುರಕ್ಷಿತವಲ್ಲ. ಹೀಗಾಗಿ ಆ ದೇಶದಲ್ಲಿ ಯಾವುದೇ ಟೂರ್ನಿ ಆಯೋಜಿಸುವುದನ್ನು ನಿರ್ಬಂಧಿಸಬೇಕು ಎಂದು ಮಿಯಾಂದಾದ್ ಐಸಿಸಿಗೆ ಮನವಿ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ