ಭಾರತೀಯ ಆಟಗಾರರ ಪರ ಮತ್ತೆ ಒಲವು ತೋರಿದ ಶಾಹಿದ್ ಅಫ್ರಿದಿ

ಮಂಗಳವಾರ, 12 ಸೆಪ್ಟಂಬರ್ 2017 (08:32 IST)
ಕರಾಚಿ: ಪಾಕಿಸ್ತಾನದಲ್ಲಿ ಮತ್ತೆ ಕ್ರಿಕೆಟ್ ಬೆಳೆಸುವ ಉದ್ದೇಶದಿಂದ ಐಸಿಸಿ ವಿಶ್ವ ಇಲೆವೆನ್ ತಂಡ ಟಿ20 ಸರಣಿಗಾಗಿ ಬಂದಿಳಿದಿದೆ. ಇದೀಗ ಎಲ್ಲಾ ತಂಡದ ಸದಸ್ಯರೂ ಇರುವಾಗ ಟೀಂ ಇಂಡಿಯಾ ಆಟಗಾರರೂ ಇದ್ದಿದ್ದರೆ ಚೆನ್ನಾಗಿರ್ತಿತ್ತು ಎಂದು ಶಾಹಿದ್ ಅಫ್ರಿದಿ ಹೇಳಿದ್ದಾರೆ.

 
ಟೀಂ ಇಂಡಿಯಾ ಆಟಗಾರರಿದ್ದಿದ್ದರೆ ವಿಶ್ವ ಇಲೆವೆನ್ ತಂಡ ಇನ್ನೂ ಉತ್ತಮವಾಗಿರುತ್ತಿತ್ತು ಎಂದು ಭಾರತೀಯ ಆಟಗಾರರ ಪರ ಅಫ್ರಿದಿ ಮತ್ತೊಮ್ಮೆ ಒಲವು ತೋರಿದ್ದಾರೆ. ವಿಶ್ವ ಇಲೆವೆನ್ ವಿರುದ್ಧ ಪಂದ್ಯ ನಡೆಯುತ್ತದೆ ಎಂದಾಗಲೇ ಅಫ್ರಿದಿ ಭಾರತೀಯ ಆಟಗಾರರೂ ಪಾಕಿಸ್ತಾನಕ್ಕೆ ಬರಲಿ ಎಂದು ಆಹ್ವಾನವಿತ್ತಿದ್ದರು.

ವಿಶ್ವ ಇಲೆವೆನ್ ತಂಡಕ್ಕೆ ದ. ಆಫ್ರಿಕಾ ನಾಯಕ ಫಾ ಡು ಪ್ಲೆಸಿಸ್ ನಾಯಕತ್ವವಿದೆ.  ಸೆಪ್ಟೆಂಬರ್ 12 ರಿಂದ 15 ರವರೆಗೆ ಮೂರು ಟಿ20 ಪಂದ್ಯಗಳನ್ನು ಈ ತಂಡ ಪಾಕ್ ತಂಡದೊಂದಿಗೆ ಆಡಲಿದೆ.

ಇದನ್ನೂ ಓದಿ.. ಅಲ್ಯುವಿರಾ ಜ್ಯೂಸ್ ಕುಡಿದರೆ ಸಿಗುವ ಲಾಭವೇನು?
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ