ಧೋನಿ ನಿವೃತ್ತಿ ಬಗ್ಗೆ ವಿಶೇಷ ಸಾಲುಗಳನ್ನು ಬರೆದ ಸಹ ಟೀಂ ಇಂಡಿಯಾ ಕ್ರಿಕೆಟಿಗರು
ಭಾನುವಾರ, 16 ಆಗಸ್ಟ್ 2020 (10:10 IST)
ಮುಂಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ಧೋನಿ ನಿವೃತ್ತಿ ಘೋಷಿಸಿರುವುದರ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ ಅವರ ನಾಯಕತ್ವದಲ್ಲಿ ಬೆಳೆದ ಕ್ರಿಕೆಟಿಗರು ವಿಶೇಷ ಸಾಲುಗಳ ಮೂಲಕ ಧನ್ಯವಾದ ಸಲ್ಲಿಸಿದ್ದಾರೆ.
ನಾಯಕ ವಿರಾಟ್ ಕೊಹ್ಲಿ ಧೋನಿ ಬಗ್ಗೆ ತಮ್ಮ ಇನ್ ಸ್ಟಾಗ್ರಾಂ ಪುಟದಲ್ಲಿ ಸುದೀರ್ಘವಾಗಿ ಬರೆದುಕೊಂಡಿದ್ದು, ನೀವು ದೇಶಕ್ಕೆ ನೀಡಿದ ಕೊಡುಗೆ ಅಪಾರ. ನೀವು ಸದಾ ನಮ್ಮೊಳಗೇ ಇರುತ್ತೀರಿ. ನಿಮ್ಮಿಂದ ನಾನು ಕಲಿತಿದ್ದು ಅಪಾರ. ಒಬ್ಬ ವ್ಯಕ್ತಿಯಾಗಿಯೂ, ಕ್ರಿಕೆಟಿಗನಾಗಿಯೂ ನೋಡಿರುವೆ. ನಿಮ್ಮ ಮುಂದಿನ ಜೀವನಕ್ಕೆ ಶುಭ ಹಾರೈಕೆಗಳು’ ಎಂದಿದ್ದಾರೆ.
ಸಚಿನ್ ತೆಂಡುಲ್ಕರ್: ಒಬ್ಬ ಲೀಡರ್ ಆಗಿ ನಿನ್ನ ಕೊಡುಗೆ ಅಪಾರ. ನಿನ್ನೊಂದಿಗೆ 2011 ರ ವಿಶ್ವಕಪ್ ಗೆದ್ದ ತಂಡದ ಭಾಗವಾಗಿರುವುದು ನನಗೆ ಖುಷಿಯ ವಿಚಾರ. ನಿನ್ನ ದ್ವಿತೀಯ ಇನಿಂಗ್ಸ್ ಗೆ ಗುಡ್ ಲಕ್.
ಹಾರ್ದಿಕ್ ಪಾಂಡ್ಯ: ಒಬ್ಬ ನಾಯಕ, ಗೆಳೆಯ, ಸಹಭಾಗಿ.. ನಿಮ್ಮ ಹಾಗೆ ಮತ್ತೊಬ್ಬರು ಸಿಗುವುದು ಕಷ್ಟ. ನಿಮ್ಮನ್ನು ತಂಡದಲ್ಲಿ ಮಿಸ್ ಮಾಡಿಕೊಳ್ಳುವೆ.
ಕೆಎಲ್ ರಾಹುಲ್: ನಿಮ್ಮ ಬಗ್ಗೆ ಹೇಳಲು ಪದಗಳೇ ಸಾಲದು. ನಿಮ್ಮ ಸಲಹೆ, ತಾಳ್ಮೆ, ಬೆಂಬಲ ಎಲ್ಲದಕ್ಕೂ ಧನ್ಯವಾದ. ನೀವು ಯಾವತ್ತೂ ನಮಗೆ ಸ್ಪೂರ್ತಿ.
ರೋಹಿತ್ ಶರ್ಮಾ: ಭಾರತೀಯ ಕ್ರಿಕೆಟ್ ಕಂಡ ಅತ್ಯಂತ ಪ್ರಭಾವೀ ನಾಯಕ. ಒಂದು ತಂಡವನ್ನು ಹೇಗೆ ಕಟ್ಟಬೇಕೆಂದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಖಂಡಿತವಾಗಿಯೂ ಅವರನ್ನು ಬ್ಲೂ ಟೀಂನಲ್ಲಿ ಮಿಸ್ ಮಾಡಿಕೊಳ್ಳುವೆವು. ಆದರೆ ಹಳದಿ ಟೀಂ ನಲ್ಲಿ ಅವರನ್ನು ನೋಡಬಹುದು.