ವಿರಾಟ್ ಕೊಹ್ಲಿಯಲ್ಲಿ ಶೊಯೇಬ್ ಅಖ್ತರ್ ಕಂಡ ‘ಪಾಕಿಸ್ತಾನಿ’ ಅಂಶ ಯಾವುದು ಗೊತ್ತಾ?!

ಬುಧವಾರ, 16 ಅಕ್ಟೋಬರ್ 2019 (09:18 IST)
ಮುಂಬೈ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಕ್ರಮಣಕಾರಿ ಆಟಕ್ಕೆ ಹೆಸರು. ಅವರು ಇತ್ತೀಚೆಗೆ ಟೆಸ್ಟ್ ಕ್ರಿಕೆಟ್ ನಲ್ಲಿ ಒಂದಾದ ಮೇಲೊಂದರಂತೆ ಗೆಲ್ಲುವುದನ್ನು ನೋಡಿ ಕ್ರಿಕೆಟ್ ಜಗತ್ತೇ ಅವರನ್ನು ಕೊಂಡಾಡುತ್ತಿದೆ.


ಈ ನಡುವೆ ಪಾಕಿಸ್ತಾನದ ಮಾಜಿ ವೇಗಿ ಶೊಯೇಬ್ ಅಖ್ತರ್ ವಿರಾಟ್ ಕೊಹ್ಲಿಯನ್ನು ಹೊಗಳುತ್ತಾ ಅವರ ಆಕ್ರಮಣಕಾರಿ ಸ್ವಭಾವವನ್ನು ಪಾಕ್ ನ ಮಾಜಿ ದಿಗ್ಗಜ ಕ್ರಿಕೆಟಿಗರಿಗೆ ಹೋಲಿಸಿದ್ದಾರೆ.

ಸಂದರ್ಶನವೊಂದರಲ್ಲಿ ಕೊಹ್ಲಿ ನಾಯಕತ್ವವನ್ನು ಹೊಗಳಿರುವ ಅಖ್ತರ್ ‘ವಿರಾಟ್ ನೋಡಿದರೆ ಪಾಕಿಸ್ತಾನದ ದಿಗ್ಗಜ ಕ್ರಿಕೆಟಿಗರನ್ನು ನೆನಪಾಗುತ್ತದೆ. ಅವರಲ್ಲಿ ಪಾಕಿಸ್ತಾನದ ಆಟಿಟ್ಯೂಡ್ ಇದೆ. ಇದರಿಂದಾಗಿಯೇ ಅವರು ಗೆಲ್ಲುವ ಕಲೆ ಕರಗತ ಮಾಡಿಕೊಂಡಿದ್ದಾರೆ’ ಎಂದಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ