ಮತ್ತೆ ಟೆಸ್ಟ್ ಕ್ರಿಕೆಟ್ ನಲ್ಲಿ ನಂ.1 ಆಗಲಿರುವ ವಿರಾಟ್ ಕೊಹ್ಲಿ

ಮಂಗಳವಾರ, 15 ಅಕ್ಟೋಬರ್ 2019 (09:06 IST)
ಮುಂಬೈ: ಆಶಸ್ ಟೆಸ್ಟ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ ಪರಿಣಾಮ ನಂ.1 ಸ್ಥಾನದಲ್ಲಿದ್ದ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿ ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಅಗ್ರ ಸ್ಥಾನ ಅಲಂಕರಿಸಿದ್ದರು.


ಆದರೆ ಈಗ ಮತ್ತೆ ಕೊಹ್ಲಿ ತಾವು ಕಳೆದುಕೊಂಡಿರುವ ಪಟ್ಟ ಮರಳಿ ಪಡೆಯುವ ಅವಕಾಶ ಪಡೆದಿದ್ದಾರೆ. ದ.ಆಫ್ರಿಕಾ ವಿರುದ್ಧ ಅಜೇಯ ದ್ವಿಶತಕ ಸಿಡಿಸಿದ ಕೊಹ್ಲಿ ಈಗ ಐಸಿಸಿ ರ್ಯಾಂಕಿಂಗ್ ನಲ್ಲಿ 936 ಅಂಕ ಪಡೆದಿದ್ದಾರೆ. ಇದರೊಂದಿಗೆ ನಂ.1 ಸ್ಥಾನದಲ್ಲಿರುವ ಸ್ಟೀವ್ ಸ್ಮಿತ್ (937 ಅಂಕ) ರಿಂದ ಕೇವಲ ಒಂದು ಅಂಕ ದೂರ ಇದ್ದಾರೆ.

ಇದೀಗ ರಾಂಚಿಯಲ್ಲಿ ಅಕ್ಟೋಬರ್ 19 ರಿಂದ ಅಂತಿಮ ಟೆಸ್ಟ್ ಪಂದ್ಯ ಆರಂಭವಾಗಲಿದ್ದು, ಈ ಪಂದ್ಯದಲ್ಲಿ ಕೊಹ್ಲಿ ಬ್ಯಾಟ್ ನಿಂದ ಸಿಡಿದರೆ ಮತ್ತೆ ನಂ.1 ಆಗಲಿದ್ದಾರೆ. ಇದರ ಜತೆಗೆ ಇದೀಗ ಐಸಿಸಿ ಬಿಡುಗಡೆ ಮಾಡಿರುವ ರ್ಯಾಂಕಿಂಗ್ ಪಟ್ಟಿಯಲ್ಲಿ ಟಾಪ್ 10 ರೊಳಗೆ ಕಾಲಿಟ್ಟಿದ್ದಾರೆ. ಇನ್ನೊಂದೆಡೆ ಅದ್ಭುತ ಫಾರ್ಮ್ ಪ್ರದರ್ಶಿಸಿರುವ ಮಯಾಂಕ್ ಅಗರ್ವಾಲ್ ಮತ್ತಷ್ಟು ಏರಿಕೆ ಕಂಡಿದ್ದು ನಂ.17 ಕ್ಕೆ ತಲುಪಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ