ಬಿಸಿಸಿಐ ನೂತನ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅವಿರೋಧ ಆಯ್ಕೆ

ಸೋಮವಾರ, 14 ಅಕ್ಟೋಬರ್ 2019 (16:50 IST)
ಬಿಸಿಸಿಐ ನೂತನ ಅಧ್ಯಕ್ಷರಾಗಿ ಟೀಂ ಇಂಡಿಯಾದ ಮಾಜಿ ನಾಯಕ ಸೌರವ್ ಗಂಗೂಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿದ್ದು, ಅದರಲ್ಲಿ ಸೌರವ್ ಗಂಗೂಲಿ ಅವಿರೋಧ ಆಯ್ಕೆಯಾಗಿದ್ದಾರೆ.

ಬಿಸಿಸಿಐ ಮಾಜಿ ಅಧ್ಯಕ್ಷ ಶ್ರೀನಿವಾಸನ್ ಸ್ಪರ್ಧೆಯಲ್ಲಿದ್ದರಾದರೂ ಕೊನೆಗೆ ಬಹುತೇಕರು ಸೌರವ್ ಗಂಗೂಲಿ ಪರ ಬ್ಯಾಟ್ ಬೀಸಿದರು.

ಇನ್ನು, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ವೀಟ್ ಮೂಲಕ ಸೌರವ್ ಗಂಗೂಲಿಗೆ ಶುಭ ಕೋರಿದ್ದಾರೆ. ಅಧ್ಯಕ್ಷರಾಗಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿರೋದಕ್ಕೆ ಒಳ್ಳೆಯದಾಗಲಿ ಅಂತ ಹೇಳಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ