ಬಾವಲಿಗಳನ್ನೆಲ್ಲಾ ಯಾಕೆ ತಿನ್ತೀರಿ? ಕೊರೋನಾ ಹರಡಿದ ಚೀನಿಯರ ವಿರುದ್ಧ ಶೊಯೇಬ್ ಅಖ್ತರ್ ಕಿಡಿ

ಭಾನುವಾರ, 15 ಮಾರ್ಚ್ 2020 (09:02 IST)
ಇಸ್ಲಾಮಾಬಾದ್: ವಿಶ್ವದೆಲ್ಲೆಡೆ ಕೊರೋನಾವೈರಸ್ ಹರಡಲು ಚೀನಿಯರ ಆಹಾರ ಕ್ರಮವೇ ಕಾರಣ ಎಂದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಕಿಡಿ ಕಾರಿದ್ದಾರೆ.


‘ಯಾಕೆ ಬಾವಲಿಯನ್ನು ತಿನ್ತೀರಿ? ಅವುಗಳ ರಕ್ತ ಕುಡಿಯುವುದು, ಮೂತ್ರ ಸೇವಿಸುವುದು ಇತ್ಯಾದಿ ಅಸಂಬದ್ಧ ಕೆಲಸ ಮಾಡುತ್ತೀರಿ? ಇದರಿಂದಾಗಿಯೇ ಇಲ್ಲಸಲ್ಲದ ವೈರಾಣುಗಳು ಹರಡುವುದು. ಇದಕ್ಕೆಲ್ಲಾ ಚೀನಿಯರೇ ಕಾರಣ. ಅವರಿಂದಾಗಿಯೇ ಇಡೀ ವಿಶ್ವವೇ ಭಯದಲ್ಲಿದೆ’ ಎಂದು ಅಖ್ತರ್ ಕಿಡಿ ಕಾರಿದ್ದಾರೆ.

ಕೊರೋನಾವೈರಸ್ ನಿಂದಾಗಿ ವಿಶ್ವದಾದ್ಯಂತ ಸಾಮಾನ್ಯ ಜೀವನವೇ ಅಸ್ತವ್ಯಸ್ತವಾಗಿದೆ. ನಾನು ಚೀನಾದ ಜನರ ವಿರೋಧಿಯಲ್ಲ. ಆದರೆ ಬಾವಲಿ, ನಾಯಿ, ಬೆಕ್ಕು ಇಂತಹ ಪ್ರಾಣಿಗಳನ್ನೆಲ್ಲಾ ತಿಂದು ಬೇರೆಯವರಿಗೆ ತೊಂದರೆ ಕೊಡುವುದು ಯಾಕೆ? ಇದರಿಂದ ಇಡೀ ಜಗತ್ತೇ ಆರ್ಥಿ ಸಂಕಷ್ಟಕ್ಕೀಡಾಗಲಿದೆ, ಜನ ಜೀವನ ಅಸ್ತವ್ಯಸ್ತವಾಗುತ್ತಿದೆ ಎಂದು ಅಖ್ತರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ