ಐಸಿಸಿ ತಂಡದಲ್ಲಿ ಪಾಕ್ ಪ್ಲೇಯರ್ ಇಲ್ಲದೇ ಇದ್ದಿದ್ದಕ್ಕೆ ಭಾರತದ ಮೇಲೆ ಅಖ್ತರ್ ಸಿಟ್ಟು

ಸೋಮವಾರ, 28 ಡಿಸೆಂಬರ್ 2020 (11:25 IST)
ಇಸ್ಲಾಮಾಬಾದ್: ಐಸಿಸಿ ಪ್ರಕಟಿಸಿರುವ ದಶಕದ ಟೆಸ್ಟ್, ಏಕದಿನ, ಟಿ20 ತಂಡದಲ್ಲಿ ಒಬ್ಬನೇ ಒಬ್ಬ ಪಾಕ್ ಕ್ರಿಕೆಟಿಗರಿಗೆ ಸ್ಥಾನ ಸಿಕ್ಕಿಲ್ಲ. ಇದು ಪಾಕ್ ಮಾಜಿ ವೇಗಿ ಶೊಯೇಬ್ ಅಖ್ತರ್ ಆಕ್ರೋಶಕ್ಕೆ ಕಾರಣವಾಗಿದೆ.


‘ಐಸಿಸಿ ಪ್ರಕಟಿಸಿರುವ ತಂಡದಲ್ಲಿ ಒಬ್ಬನೇ ಒಬ್ಬ ಪಾಕ್ ಆಟಗಾರನಿಲ್ಲ. ಇದು ಐಸಿಸಿ ತಂಡವಲ್ಲ, ಐಪಿಎಲ್ ತಂಡ. ನಾವೂ ಐಸಿಸಿ ಸದಸ್ಯರು ಎಂಬುದನ್ನು ಬಹುಶಃ ಮರೆತಂತಿದೆ. ಪ್ರಸಕ್ತ ಐಸಿಸಿ ಶ್ರೇಯಾಂಕದಲ್ಲಿ ಟಾಪ್ ಸ್ಥಾನದಲ್ಲಿರುವ ಬಾಬರ್ ಅಜಮ್ ರನ್ನೂ ಆಯ್ಕೆ ಮಾಡಿಲ್ಲ. ವಿರಾಟ್ ಕೊಹ್ಲಿಗೆ ಹೋಲಿಸಿದರೂ ಸದ್ಯಕ್ಕೆ ಅವರಂತಹ ಬೆಸ್ಟ್ ಟಿ20 ಪ್ಲೇಯರ್ ಇಲ್ಲ. ಐಸಿಸಿಗೆ ಹಣ, ಟಿವಿ ರೈಟ್ಸ್ ಮಾತ್ರವೇ ಮುಖ್ಯ. ಇದು ಜಾಗತಿಕ ತಂಡವಲ್ಲ. ಬಹುಶಃ ನನ್ನ ಈ ವಿಡಿಯೋ ನೋಡಿದ ಮೇಲಾದರೂ ತಾವು ಎಂಥಾ ತಪ್ಪು ಮಾಡಿದ್ದೇವೆ ಎಂದು ಐಸಿಸಿಗೆ ಗೊತ್ತಾಗಬಹುದು’ ಎಂದು ಅಖ್ತರ್ ಕಿಡಿ ಕಾರಿದ್ದಾರೆ. ಭಾರತೀಯ ಕ್ರಿಕೆಟಿಗರಿಗೇ ಹೆಚ್ಚಿನ ಪ್ರಾಶಸ್ತ್ಯ ವಿಧಿಸಿರುವುದನ್ನು ಪರೋಕ್ಷವಾಗಿ ಅವರು ವ್ಯಂಗ್ಯ ಮಾಡಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ