ಪಾಕಿಸ್ತಾನ ಕ್ರಿಕೆಟ್ ನಲ್ಲೀಗ ಈ ಸಿಖ್ ಹುಡುಗನದ್ದೇ ಮಾತು

ಮಂಗಳವಾರ, 27 ಡಿಸೆಂಬರ್ 2016 (07:35 IST)
ಕರಾಚಿ: ಆತ ಇನ್ನೂ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗಿಲ್ಲ. ಆದರೂ ಈಗಲೇ ಪಾಕಿಸ್ತಾನ ಕ್ರಿಕೆಟ್ ನಲ್ಲಿ ಸಂಚಲನ ಮೂಡಿಸುತ್ತಿದ್ದಾನೆ. ಕಾರಣ, ಪಾಕಿಸ್ತಾನ ನ್ಯಾಷನಲ್ ಕ್ರಿಕೆಟ್ ಅಕಾಡಮಿಗೆ ಆಯ್ಕೆಯಾದ ಮೊದಲ ಸಿಖ್ ಧರ್ಮೀಯ ಈತ ಎನ್ನುವುದು ವಿಶೇಷ.


ಈ ಪ್ರತಿಭಾವಂತನ ಹೆಸರು ಮಹಿಂದರ್ ಪಾಲ್ ಸಿಂಗ್.  ವೇಗದ ಬೌಲರ್ ಆಗಿರುವ ಮಹಿಂದರ್, ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಡೆಸುವ ರಾಷ್ಟ್ರೀಯ ಕ್ಯಾಂಪ್ ಗೆ ಆಯ್ಕೆಯಾಗಿದ್ದಾರೆ. ಇಲ್ಲಿ ಉತ್ತಮ ಪ್ರದರ್ಶನ ತೋರಿದವರು ನೇರವಾಗಿ ರಾಷ್ಟ್ರೀಯ ತಂಡಕ್ಕೆ ಆಯ್ಕೆಯಾಗುತ್ತಾರೆ.

ಲಾಹೋರ್ ನಿವಾಸಿಯಾಗಿರುವ ಮಹಿಂದರ್ ಇದೀಗ ಮುಸ್ಲಿಮೇತರ ಕ್ರಿಕೆಟಿಗ ಎನ್ನುವ ಕಾರಣಕ್ಕೆ ಸುದ್ದಿಯಲ್ಲಿದ್ದಾರೆ. ಈ ಮೊದಲು ಸ್ಪಿನ್ನರ್ ದನೀಶ್ ಕನೇರಿಯಾ ಮುಸ್ಲಿಮೇತರ ಆಟಗಾರನಾಗಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಿದ್ದರು. ಇದೀಗ ಅವರಿಗೆ ಸಾಧ್ಯವಾಗಿದ್ದು ತನಗೇಕೆ ಸಾಧ್ಯವಿಲ್ಲ ಎಂದು ಮಹಿಂದರ್ ಕೇಳುತ್ತಾರೆ.

ಇದುವರೆಗೆ ತನಗೆ ಧರ್ಮದ ಹೆಸರಿನಲ್ಲಿ ಯಾರೂ ತಾರತಮ್ಯ ತೋರಿಲ್ಲ. ನನ್ನ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸಿದ್ದಾರೆ ಎಂದು ಮಹಿಂದರ್ ಹೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ