ಡಿ ವಿಲಿಯರ್ಸ್ ಚೇಸ್‌ಗಳಲ್ಲಿ 13 ನಾಟ್ ಔಟ್‌ಗಳು, 13 ಗೆಲವುಗಳು

ಬುಧವಾರ, 25 ಮೇ 2016 (11:31 IST)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಟೇಬರ್ ಟಾಪರ್ ಗುಜರಾತ್ ಲಯನ್ಸ್ ವಿರುದ್ದ ರೋಚಕ ಜಯಗಳಿಸಿ ಮೂರನೇ ಬಾರಿಗೆ ಐಪಿಎಲ್ ಫೈನಲ್ ತಲುಪಿದ್ದಾರೆ. ಏರುಪೇರಾಗುತ್ತಿದ್ದ ಅದೃಷ್ಟದ ಪಂದ್ಯದಲ್ಲಿ, ಪವರ್ ಪ್ಲೇ ಓವರುಗಳ ಅನುಕೂಲ ಪಡೆದ ರಾಯಲ್ ಚಾಲೆಂಜರ್ಸ್ ಗುಜರಾತ್ ಲಯನ್ಸ್ ವಿಕೆಟ್‌ಗಳನ್ನು ಉರುಳಿಸಿದರೂ ಡ್ವೇನ್ ಸ್ಮಿತ್ ಅವರು ಇನ್ನಿಂಗ್ಸ್ ಕಟ್ಟಿದ್ದರಿಂದ ಲಯನ್ಸ್ ತಂಡವನ್ನು ಹಳಿ ಮೇಲೆ ಇರಿಸಿತು.

ರಾಯಲ್ ಚಾಲೆಂಜರ್ಸ್ ಆರಂಭದಲ್ಲೇ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಪವರ್ ಪ್ಲೇ ಓವರುಗಳೊಳಗೆ ಐದು ವಿಕೆಟ್ ಕಳೆದುಕೊಂಡಿತ್ತು. ಆದರೆ ಎಬಿ ಡಿವಿಲಿಯರ್ಸ್ ಅವರ ಇನ್ನೊಂದು ಮಾಸ್ಟರ್ ಪೀಸ್ ಬ್ಯಾಟಿಂಗ್ ನೆರವಿನಿಂದ ತಂಡವು ಚೇತರಿಸಿಕೊಂಡು ಐಪಿಎಲ್ ಫೈನಲ್‌ಗೆ ತಂದಿರಿಸಿದರು.
 
ಮೊದಲ ಕ್ವಾಲಿಫೈಯರ್ ಪಂದ್ಯದ ಅಂಕಿಅಂಶದ ವಿವರಗಳು
ಐಪಿಎಲ್‌‍ನಲ್ಲಿ ಸೆಕೆಂಡ್ ಬ್ಯಾಟಿಂಗ್ ಮಾಡುವಾಗ ಎಬಿ ಡಿವಿಲಿಯರ್ಸ್  79 ನಾಟೌಟ್ ಅವರ ಎರಡನೇ ಅತ್ಯಧಿಕ ಸ್ಕೋರಾಗಿದೆ. ಇದೇ ಮೈದಾನದಲ್ಲಿ 2014ರಲ್ಲಿ ಸನ್‌ರೈಸರ್ಸ್ ವಿರುದ್ಧ ಅವರು 41 ಎಸೆತಗಳಲ್ಲಿ ಅಜೇಯ 89 ರನ್ ಗಳಿಸಿದ್ದರು.
ಎಡಿ ಡಿವಿಲಿಯರ್ಸ್ ಈ ಸೀಸನ್‌ನಲ್ಲಿ ಲಯನ್ಸ್ ವಿರುದ್ಧ 228 ರನ್  ಸ್ಕೋರ್ ಮಾಡಿದ್ದು ಈ ಆವೃತ್ತಿಯಲ್ಲಿ ನಿರ್ದಿಷ್ಟ ಎದುರಾಳಿ ತಂಡದ ವಿರುದ್ಧ ಅತ್ಯಧಿಕ ಸ್ಕೋರಾಗಿದೆ. ಈ ಸೀಸನ್‌ನಲ್ಲಿ ನಿರ್ದಿಷ್ಟ ಎದುರಾಳಿ ತಂಡದ ವಿರುದ್ದ 200+ ಸ್ಕೋರ್ ಮಾಡಿದ ಇನ್ನೊಬ್ಬ ಆಟಗಾರ ವಿರಾಟ್ ಕೊಹ್ಲಿಯಾಗಿದ್ದು ಅವರು ಲಯನ್ಸ್ ವಿರುದ್ಧ 209 ರನ್ ಸ್ಕೋರ್ ಮಾಡಿದ್ದಾರೆ.
 
ಡಿ ವಿಲಿಯರ್ಸ್ ರನ್ ಚೇಸ್‌ಗಳಲ್ಲಿ 13 ಬಾರಿ ಅಜೇಯರಾಗಿ ಉಳಿದಿದ್ದಾರೆ.( ಡೇರ್‌ಡೆವಿಲ್ಸ್ ಪರ 3 ಬಾರಿ ಮತ್ತು ರಾಯಲ್ ಪರ 10 ಬಾರಿ ನಾಟೌಟ್) ಮತ್ತು ಅವರ ತಂಡ ಎಲ್ಲಾ 13 ಪಂದ್ಯಗಳನ್ನು ಗೆದ್ದಿವೆ. ರೋಹಿತ್ ಶರ್ಮಾ ಕೂಡ ಇದೇ ರೀತಿ ದಾಖಲೆ ನಿರ್ಮಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ