ಬಿಸಿಸಿಐ ಕೋಚ್ ಬದಲಾವಣೆಗೆ ಬಯಸುತ್ತಿದ್ದರೆ ರಾಹುಲ್ ದ್ರಾವಿಡ್‌ಗಿಂತ ಉತ್ತಮ ಕೋಚ್ ಬೇರೊಬ್ಬರಿಲ್ಲ ಎಂದು ಸುನಿಲ್ ಗವಾಸ್ಕರ್ ಪ್ರತಿಕ್ರಿಯಿಸಿದರು. ಆಸ್ಟ್ರೇಲಿಯಾದ ಮಾಜಿ ನಾಯಕ ರಿಕಿ ಪಾಂಟಿಂಗ್ ಕೂಡ ಅಂಡರ್ -19 ಭಾರತ ಕೋಚ್ ಮತ್ತು ಪ್ರಸಕ್ತ ಡೆಲ್ಲಿ ಡೇರ್‌ಡೆವಿಲ್ ಮಾರ್ಗದರ್ಶಕ ದ್ರಾವಿಡ್ ಅವರು ಈ ಹುದ್ದೆಗೆ ಸೂಕ್ತ ವ್ಯಕ್ತಿ ಎಂದು ಬೆಂಬಲಿಸಿದ್ದಾರೆ.