ಟೀಂ ಇಂಡಿಯಾಗೆ ಆಯ್ಕೆಯಾಗಲು ಏನು ಮಾಡಬೇಕು ಗೊತ್ತೇ?! ಗವಾಸ್ಕರ್ ಹೇಳ್ತಾರೆ ಕೇಳಿ!

ಸೋಮವಾರ, 4 ಸೆಪ್ಟಂಬರ್ 2017 (08:19 IST)
ಮುಂಬೈ: ಹಿರಿಯ ಬ್ಯಾಟಿಂಗ್ ಕಲಿ ಸುನಿಲ್ ಗವಾಸ್ಕರ್ ಮತ್ತೆ ಟೀಂ ಇಂಡಿಯಾ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.

 
ಭಾರತ ತಂಡದ ಆಯ್ಕೆ ಪ್ರಕ್ರಿಯೆ ಬಗ್ಗೆಯೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ಭಾರತ  ತಂಡದಲ್ಲಿ ಕೆಲವು ನಿಜವಾದ ಪ್ರತಿಭಾವಂತರು ಹೊರಗುಳಿಯುತ್ತಿದ್ದಾರೆ. ಅವರಿಗೆ ಅವಕಾಶ ಸಿಗಬೇಕೆಂದರೆ ಅವರು ಮೈ ಮೇಲೆ ಟ್ಯಾಟೂ ಹಾಕಿಸಿಕೊಂಡು, ಒಳ್ಳೆ ಹೇರ್ ಸ್ಟೈಲ್ ಮಾಡಿಕೊಂಡು ಬರಬೇಕು’ ಎಂದು ಗವಾಸ್ಕರ್ ವ್ಯಂಗ್ಯವಾಗಿ ಹೇಳಿದ್ದಾರೆ.

ಇಡೀ ಸರಣಿಯಲ್ಲಿ ಆಟಗಾರರನ್ನು ಹನ್ನೊಂದರ ಬಳಗಕ್ಕೆ ಸೇರಿಸುವಾಗ ತಾರತಮ್ಯ ನಡೆಯುತ್ತಿದ್ದ ಎಂದು ಅವರು ಆರೋಪಿಸಿದ್ದಾರೆ. ವಿಂಡೀಸ್ ಸರಣಿಯಲ್ಲಿ ಅತ್ಯಧಿಕ ರನ್ ಗಳಿಸಿದ ಹೊರತಾಗಿಯೂ ಅಜಿಂಕ್ಯಾ ರೆಹಾನೆಯನ್ನು ಬಿಟ್ಟು ಕೆಎಲ್ ರಾಹುಲ್ ರನ್ನು ಆಡಿಸಲಾಗುತ್ತಿದೆ ಎಂದು ಅವರು ಕಿಡಿ ಕಾರಿದ್ದಾರೆ.

ಅಲ್ಲದೆ, ನಾಲ್ಕನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಬದಲಿಗೆ ಮೊದಲು ಹಾರ್ದಿಕ್ ಪಾಂಡ್ಯರನ್ನು ಬ್ಯಾಟಿಂಗ್ ಗೆ ಇಳಿಸಿದ ಕೊಹ್ಲಿ ಕ್ರಮವನ್ನೂ ಅವರು ಪ್ರಶ್ನಿಸಿದ್ದಾರೆ. ರಾಹುಲ್ ರನ್ನು ಮೊದಲು ಬ್ಯಾಟಿಂಗ್ ಗೆ ಇಳಿಸಿದ್ದರೆ ಆತನಿಗೂ ಆಡಲು ಸಮಯ ಸಿಗುತ್ತಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಹಿಂದೆ, ಅನಿಲ್ ಕುಂಬ್ಳೆ-ಕೊಹ್ಲಿ ವಿವಾದದ ಸಂದರ್ಭದಲ್ಲೂ ಗವಾಸ್ಕರ್ ತಂಡದ ಶಾಪಿಂಗ್ ಸಂಸ್ಕೃತಿಯನ್ನು ಟೀಕಿಸಿದ್ದರು.

ಇದನ್ನೂ ಓದಿ.. ಕ್ರೀಡಾ ಇಲಾಖೆಯ ಸಚಿವರಾಗಲು ಇವರಿಗಿಂತ ಉತ್ತಮರು ಇರಬಹುದೇ?!
 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ