ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿ ಕ್ರಿಕೆಟಿಗ ಸುರೇಶ್ ರೈನಾ

ಮಂಗಳವಾರ, 24 ಮಾರ್ಚ್ 2020 (09:35 IST)
ಚೆನ್ನೈ: ಕ್ರಿಕೆಟಿಗ ಸುರೇಶ್ ರೈನಾ ಗಂಡು ಮಗುವಿಗೆ ತಂದೆಯಾದ ಖುಷಿಯಲ್ಲಿದ್ದಾರೆ. ಸೋಮವಾರ ರೈನಾ ಪತ್ನಿ ಪ್ರಿಯಾಂಕ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.


ಈ ವಿಚಾರವನ್ನು ಸಹ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಟ್ವಿಟರ್ ಪೇಜ್ ಮೂಲಕ ಪ್ರಕಟಿಸಿದ್ದಾರೆ. ಇದು ರೈನಾ ದಂಪತಿಯ ಎರಡನೇ ಮಗುವಾಗಿದೆ.

2016 ರಲ್ಲಿ ಪ್ರಿಯಾಂಕ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರು. ರೈನಾಗೆ ಶುಭ ಕೋರಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಟ್ವಿಟರ್ ಪೇಜ್ ಮುದ್ದು ಮಗುವಿಗೆ ‘ಕುಟ್ಟಿ ತಲಾ’ ಎಂದು ಸ್ವಾಗತ ಕೋರಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ