ಪುರುಷರ ಟಿ20 ವಿಶ್ವಕಪ್ ನಾಕೌಟ್ ಹಂತದಲ್ಲಿ ಈ ಬದಲಾವಣೆ ಸಾಧ್ಯತೆ

ಸೋಮವಾರ, 23 ಮಾರ್ಚ್ 2020 (09:56 IST)
ಸಿಡ್ನಿ: ಮಹಿಳಾ ಟಿ20 ವಿಶ್ವಕಪ್ ನಾಕೌಟ್ ಹಂತದಲ್ಲಿ ಮೀಸಲು ದಿನವಿಲ್ಲದೇ ಸೆಮಿಫೈನಲ್ ರದ್ದಾದ ಬಳಿಕ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಮತ್ತು ಪುರುಷರ ಕ್ರಿಕೆಟ್ ಟಿ20 ಆಯೋಜಕರು ಪಾಠ ಕಲಿತಿದ್ದಾರೆ.


ಆಸ್ಟ್ರೇಲಿಯಾದಲ್ಲಿ ನವಂಬರ್ ನಲ್ಲಿ ನಡೆಯಲಿರುವ ಪುರುಷರ ಟಿ20 ವಿಶ್ವಕಪ್ ಕ್ರಿಕೆಟ್ ಕೂಟದ ನಾಕೌಟ್ ಹಂತದಲ್ಲಿ ಮಳೆ ಬಂದರೆ ಪಂದ್ಯ ರದ್ದಾಗದಂತೆ ಮೀಸಲು ದಿನ ನಿಗದಿಪಡಿಸಲು ಐಸಿಸಿಗೆ ಮನವಿ ಸಲ್ಲಿಸಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ.

ಸದ್ಯದ ನಿಯಮದ ಪ್ರಕಾರ ಫೈನಲ್ ಪಂದ್ಯಕ್ಕೆ ಮಾತ್ರವೇ ಮೀಸಲು ದಿನವಿದೆ. ಆದರೆ ಸೆಮಿಫೈನಲ್ ನಲ್ಲಿ ಮಳೆ ಬಂದರೆ ಪಂದ್ಯ ರದ್ದಾಗುತ್ತದೆ. ಇದರಿಂದ ರೋಚಕ ಪಂದ್ಯಗಳನ್ನು ನೋಡಲು ಬರುವ ಪ್ರೇಕ್ಷಕರಿಗೆ ನಿರಾಸೆಯಾಗುತ್ತದೆ. ಅಲ್ಲದೆ ಸೆಮಿಫೈನಲ್ ಗೆ ಬಂದ ಇನ್ನೊಂದು ತಂಡಕ್ಕೆ ಅನ್ಯಾಯವಾದಂತಾಗುತ್ತದೆ. ಹೀಗಾಗಿ ನಿಯಮ ಬದಲಿಸಲು ಆಯೋಜಕರು ಚಿಂತನೆ ನಡೆಸಿದ್ದಾರೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ