ಬೆಂಗಳೂರು: ಶ್ರೀಲಂಕಾದ ಕ್ರಿಕೆಟ್ ದಿಗ್ಗಜ ಆಟಗಾರ ಮುತ್ತಯ್ಯ ಮುರಳೀಧರನ್ ಅವರು ಕರ್ನಾಟಕದ ಚಾಮರಾಜನಗರದಲ್ಲಿ ಪಾನೀಯ ಮತ್ತು ಸಿಹಿ ತಿಂಡಿ ಘಟಕವನ್ನು ಸ್ಥಾಪಿಸಲು ₹ 1,400 ಕೋಟಿ ಹೂಡಿಕೆ ಮಾಡಲಿದ್ದಾರೆ.
ಮಾಜಿ ಸ್ಪಿನ್ ಮಾಂತ್ರಿಕ ಮುರಳೀಧರನ್, ಕರ್ನಾಟಕ ಪಾನೀಯ ಘಟಕದಲ್ಲಿ ₹ 1,400 ಕೋಟಿ ಹೂಡಿಕೆ ಮಾಡಲು ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಯೊಂದಿಗೆ ಯೋಜಿಸಲಾಗಿದ್ದ ಯೋಜನೆಯನ್ನು ಈಗ ಒಟ್ಟು 1,000 ರೂ. ಕೋಟಿಗೆ ಪರಿಷ್ಕರಿಸಲಾಗಿದೆ. ಇನ್ನು ಕೆಲವೇ ವರ್ಷಗಳಲ್ಲಿ ₹ 1,400 ಕೋಟಿಗೆ ಹೆಚ್ಚಿಸಲಾಗುವುದು ಎಂದು ರಾಜ್ಯದ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ. ಪಾಟೀಲ್ ಈ ವಿಷಯ ತಿಳಿಸಿದ್ದಾರೆ.
ಮುತ್ತಯ್ಯ ಮುರಳೀಧರನ್ ಅವರನ್ನು ಅಭಿನಂದಿಸಿದ ಸಚಿವ ಪಾಟೀಲ್ ಅವರು ಈ ಕುರಿತು ತಮ್ಮ ಸಾಮಾಜಿಕ ಮಾಧ್ಯಮ ಹ್ಯಾಂಡಲ್ ಎಕ್ಸ್ ಮೂಲಕ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಸ್ತುತ 1,000 ಕೋಟಿ ರೂಪಾಯಿ ಉತ್ಪಾದನಾ ಘಟಕವು ಅಭಿವೃದ್ಧಿ ಹಂತದಲ್ಲಿದೆ. ಹೂಡಿಕೆಯನ್ನು 1,400 ಕೋಟಿ ರೂ. ಗೆ ಹೆಚ್ಚಿಸುವ ಯೋಜನೆ ಇದೆ ಎಂದು ಹೇಳಿದ್ದಾರೆ.
ಪ್ರಸ್ತಾವಿತ ಕಾರ್ಖಾನೆಯನ್ನು ಮುತ್ತಯ್ಯ ಬೆವರೇಜಸ್ ಮತ್ತು ಸಿಹಿ ತಿಂಡಿ ಹೆಸರಿನಲ್ಲಿ ಸ್ಥಾಪಿಸಲಾಗುತ್ತಿದೆ. ಈಗಾಗಲೇ 46 ಎಕರೆ ಭೂಮಿಯನ್ನು ಮಂಜೂರು ಮಾಡಿರುವ ಯೋಜನೆಗೆ ಆರಂಭದಲ್ಲಿ 230 ಕೋಟಿ ರೂ. ಹೂಡಿಕೆಯಲ್ಲಿ ಯೋಜಿಸಲಾಗಿತ್ತು, ಆದರೆ ಹೆಚ್ಚಿನದನ್ನು ಪರಿಷ್ಕರಿಸಲಾಗಿದೆ.
2025ರ ಜನವರಿಯಲ್ಲಿ ಉತ್ಪಾದನಾ ಕಾರ್ಯಾಚರಣೆ ಆರಂಭವಾಗುವ ನಿರೀಕ್ಷೆಯಿದೆ ಎಂದು ತಿಳಿಸಿರುವ ಸಚಿವರು, ಮಂಜೂರು ಮಾಡಿದ ಭೂಮಿಗೆ ಸಂಬಂಧಿಸಿದ ಸಣ್ಣಪುಟ್ಟ ಸಮಸ್ಯೆಗಳನ್ನು ಪರಿಹರಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಸಚಿವರು ಹೇಳಿದ್ದಾರೆ.