ನವದೆಹಲಿ: ಕಾಂಗ್ರೆಸ್ನ ನಾಯಕ, ಸಂಸದ ರಾಹುಲ್ ಗಾಂಧಿ ಅವರು ಇಂದು 54ನೇ ಜನ್ಮದಿನ ಸಂಭ್ರಮದಲ್ಲಿದ್ದು, ಅವರಿಗೆ ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಜಕೀಯ ಸೇರಿದಂತೆ ಗಣ್ಯರು ಹಾಗೂ ಅಭಿಮಾನಿಗಳು ಶುಭಾಶಯಗಳನ್ನು ಕೋರಿದ್ದಾರೆ.
ವಿಶೇಷವಾಗಿ ಅವರ ಸಹೋದರಿ ಪ್ರಿಯಾಂಕಾ ಗಾಂಧಿ ಭಾವನಾತ್ಮಕ ಸಂದೇಶ ಹಂಚಿಕೊಂಡಿದ್ದಾರೆ. ರಾಹುಲ್ ಗಾಂಧಿ ಅವರನ್ನು ನನ್ನ ಗೆಳೆಯ, ವಾದಪ್ರಿಯ ಮಾರ್ಗದರ್ಶಕ, ತತ್ವಜ್ಞಾನಿ ಮತ್ತು ನಾಯಕ ಎಂದು ಸಂಬೋಧಿಸಿದ್ದಾರೆ.
ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಶುಭಾಶಯ ಕೋರಿದ್ದಾರೆ. ಬಡವರಿಗೆ ಬಂಧು, ರಾಜಕಾರಣಿಗಳಿಗೆ ಆದರ್ಶ ನಾಯಕ, ಯುವಜನರಿಗೆ ಸ್ಫೂರ್ತಿಯಾಗಿರುವ ದೇಶದ ಆಶಾಕಿರಣ ಮತ್ತು ಕಾಂಗ್ರೆಸ್ ಪಕ್ಷದ ಹೆಮ್ಮೆಯ ನಾಯಕ ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮ ಸೈದ್ಧಾಂತಿಕ ಬದ್ದತೆ, ಜನಪರ ಕಾಳಜಿ ಮತ್ತು ಕಠಿಣಶ್ರಮದ ಮೌಲ್ಯಗಳನ್ನು ಅಳವಡಿಸಿಕೊಂಡು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕ ಮತ್ತು ಕಾರ್ಯಕರ್ತ ದುಡಿದರೆ ಕಾಂಗ್ರೆಸ್ ಪಕ್ಷ ಮತ್ತೆ ಗತವೈಭವದ ದಿನಗಳಿಗೆ ಮರಳುವುದರಲ್ಲಿ ಯಾವುದೇ ಸಂಶಯ ಇಲ್ಲ. ನಿಮಗೆ ಭಗವಂತ ಆಯುಷ್ಯ-ಆರೋಗ್ಯವನ್ನು ದಯಪಾಲಿಸಲಿ' ಎಂದು ಹೇಳಿದ್ದಾರೆ.
ದೇಶಕ್ಕೆ ಸೇವೆ ಸಲ್ಲಿಸುವ ನಿಮ್ಮ ಬದ್ಧತೆ ಮತ್ತು ಉತ್ಸಾಹ ಎಲ್ಲರಿಗೂ ಪ್ರೇರಣೆಯಾಗಿದೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಬರೆದುಕೊಂಡಿದ್ದಾರೆ.